ಕಾಸರಗೋಡು: ಸಮುದ್ರಕೊರೆತದಿಂದ ಅನಾಹುತಕ್ಕೆ ತುತ್ತಾಗಿರುವ ಬೇಕಲ ತ್ರಿಕನ್ನಾಡು ಕರಾವಳಿ ಪ್ರದೇಶಕ್ಕೆ ಭಾನುವಾರ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಭೇಟಿ ನೀಡಿ ಅವಲೋಕನ ನಡೆಸಿದರು. ಸಮುದ್ರಕೊರೆತ ಗಂಭೀರವಾಗಿರುವ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಲು ನೂತನ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬೇಕಲ ತ್ರಿಕ್ಕನ್ನಾಡ್ ಸಮುದ್ರ ಕರಾವಳಿಯಲ್ಲಿ ನಬಾರ್ಡ್ ನೆರವಿನಿಂದ ನೆರೆ ಸಂರಕ್ಷಣಾ ತಡೆ ಗೋಡೆ ನಿರ್ಮಿಸಲು ಹತ್ತು ದಿನದೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದರು.
ಪ್ರಕ್ಷುಬ್ಧಗೊಂಡ ಸಮುದ್ರ:
ಸಮುದ್ರ ಪ್ರಕ್ಷುಬ್ಧಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋಟಿಕುಳಂ ಗ್ರಾಮ ವ್ಯಾಪ್ತಿಯ ತ್ರಿಕ್ಕನ್ನಾಡು ಮತ್ತು ಬೇಕಲ ಪ್ರದೇಶದಲ್ಲಿ ಸಮುದ್ರವು ಒಂದೂವರೆ ಮೀಟರ್‍ಗೂ ಹೆಚ್ಚು ಎತ್ತರಕ್ಕೆ ನೆರೆ ಅಪ್ಪಳಿಸಿದ್ದು, ಈ ಪ್ರದೇಶದಲ್ಲಿ ಆತಂಕಕ್ಕೂ ಕಾರಣವಾಯಿತು. ಆದರೆ ಜನರನ್ನು ಸ್ಥಳಾಂತರಿಸುವ ಅಗತ್ಯವಿಲ್ಲ ಎ<ಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.