ಕೊಟ್ಟಾಯಂ: 80 ಕೋಟಿ ರೂಪಾಯಿ ವೆಚ್ಚದ ಶಬರಿಮಲೆ ರೋಪ್‍ವೇ ನಿರ್ಮಾಣಕ್ಕೆ ಸನ್ನಿಧಾನಂನಿಂದ ಪಂಬಾವರೆಗೆ ಸರ್ವೆ ಮಾಡಿ ಜಂಡಾ ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದೆ.
ಹೈಕೋರ್ಟ್ ಸೂಚನೆ ಮೇರೆಗೆ ಅಡ್ವೊಕೇಟ್ ಕಮಿಷನ್ ಎಸ್ ಪಿ ಕುರುಪ್ ಸಮ್ಮುಖದಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷಾ ಉಪನಿರ್ದೇಶಕ ಡಿ. ಮೋಹನ್ ದೇವ್ ಮತ್ತು ಅರಣ್ಯ ಸರ್ವೇಕ್ಷಣಾ ತಂಡದ ಅಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಮಲಿಕಪ್ಪುರಂ ಪೆÇಲೀಸ್ ಬ್ಯಾರಕ್ ಹಿಂಭಾಗದಿಂದ ಸರ್ವೆ ಆರಂಭವಾಯಿತು. ಮೇ 23ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.
ಅರಣ್ಯ ಇಲಾಖೆಯ ಪ್ರಸ್ತಾವನೆ ಪರಿಗಣಿಸಿ ರೋಪ್ ವೇ ಎತ್ತರವನ್ನು 35 ಮೀಟರ್ ನಿಂದ 60 ಮೀಟರ್ ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಕಡಿಯಬೇಕಾದ ಮರಗಳ ಸಂಖ್ಯೆ 510ರಿಂದ 50ಕ್ಕೆ ಇಳಿಯಲಿದೆ. ಪರಿಷ್ಕøತ ಯೋಜನೆ ಪ್ರಕಾರ ಕಂಬಗಳ ಸಂಖ್ಯೆಯೂ 5ಕ್ಕೆ ಇಳಿಯಲಿದೆ. ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ನೇರವಾಗಿ ತಲುಪುವಂತೆ ಕಂಬಗಳ ಸ್ಥಾನವನ್ನೂ ನಿರ್ಧರಿಸಲಾಯಿತು.
ರೋಪ್‍ವೇ ನಿಲ್ದಾಣ ಮತ್ತು ಕಚೇರಿ ಸೇರಿದಂತೆ, ನಿರ್ಮಾಣಕ್ಕೆ ಕಾಲು ಎಕರೆ ಭೂಮಿ ಬೇಕಾಗುತ್ತದೆ. ಹೆಚ್ಚು ಮರಗಳನ್ನು ಕಡಿಯುವುದನ್ನು ತಪ್ಪಿಸಲು ದೇವಸ್ವಂ ಬೋರ್ಡ್ 20 ಸೆಂಟ್ಸ್ ನೀಡುತ್ತಿದೆ.
ಪಂಪಾದಿಂದ ಸನ್ನಿಧಾನಕ್ಕೆ ಸರಕು ಸಾಗಣೆಗೆ ಅನುಕೂಲವಾಗುವಂತೆ ಮತ್ತು ಆಂಬ್ಯುಲೆನ್ಸ್ ಸೇವೆಗಾಗಿ ರೋಪ್‍ವೇ ನಿರ್ಮಿಸಲಾಗುತ್ತಿದೆ.