ಮಂಜೇಶ್ವರ: ಮಂಜೇಶ್ವರದ ವಿವಿಧ ಗ್ರಾಂಗಳಲ್ಲಿ ಕಂದಾಯ ಇಲಾಖೆ ಅದಿಕಾರಿಗಳು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ದೇಶದನ್ವಯ, ಮಂಜೇಶ್ವರಂ ಭೂರೇಖಾ ತಹಸೀಲ್ದಾರ್ ಕೆ.ಜಿ.ಮೋಹನರಾಜ್ ನೇತೃತ್ವದಲ್ಲಿ ತಾಲೂಕು ಸ್ಕ್ವಾಡ್ ಮಂಜೇಶ್ವರಂ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಮಿಂಚಿನ ತಪಾಸಣೆ ನಡೆಸಿತು. ವಿವಿಧ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶದಿಂದ ಆರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವಾರದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 10 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.