ಕಾಸರಗೋಡು: ಮನೆಯೊಳಗೆ ಮಲಗಿದ್ದ ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ ಕಿರುಕುಳ ನೀಡಿದ ಶಂಕಿತ ಯುವಕನೋರ್ವ ಬಂಧಿಸಲಾಗಿದೆ.
ಈ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಇದೇ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪೋಲಿಸ್ ಮಾಹಿತಿ ದೃಢಪಟ್ಟಿಲ್ಲ. ಆತನನ್ನು ಸಂಬಂಧಿಕರ ಮನೆಯಿಂದ ಬಂಧಿಸಲಾಗಿದೆ. ಮಗು ನೀಡಿದ ಹೇಳಿಕೆ ಆಧರಿಸಿ ಆತನನ್ನು ವಶಕ್ಕೆ ಪಡೆಯಲಾಗಿದೆ.
ಪೋಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ತೆಳ್ಳಗಿನ ದೇಹ ಹೊಂದಿರುವ ಮಲಯಾಳಂ ಮಾತನಾಡುವ ವ್ಯಕ್ತಿ ತನ್ನನ್ನು ಅಪಹರಿಸಿದ್ದಾರೆ ಎಂದು ಬಾಲಕಿ ಪೋಲೀಸರಿಗೆ ಈ ಹಿಂದೆ ಹೇಳಿಕೆ ನೀಡಿದ್ದಳು. ಇದರ ಆಧಾರದ ಮೇಲೆ ಶಂಕಿತ ಆರೋಪಿಯನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಬುಧವಾರ ಬೆಳಗಿನ ಜಾವ ಮೂರು ಗಂಟೆಗೆ ಈ ಘಟನೆ ನಡೆದಿತ್ತುÉ. ಅಜ್ಜ ಹಾಲು ಕರೆಯಲು ತೆರಳಿದ್ದಾಗ ಈ ಘಟನೆ ನಡೆದಿದೆ. ಮನೆಗೆ ನುಗ್ಗಿದ ದುಷ್ಕರ್ಮಿ ಮಲಗಿದ್ದ ಬಾಲಕಿಯನ್ನು ಹಿಡಿದು ಸ್ಥಳದಿಂದ ತೆರಳಿದ್ದಾನೆ. ಬಳಿಕ ಆಕೆಯ ಕಿವಿಯ ಆಭರಣಗಳನ್ನು ಕದ್ದು ಬಾಲಕಿಯನ್ನು ಮನೆಯಿಂದ 500 ಮೀಟರ್ ದೂರದಲ್ಲಿ ಬಿಟ್ಟು ಹೋಗಿದ್ದ.