ಕಾಸರಗೋಡು: ಲೋಕಸಭೆ ಚುನಾವಣೆಯ ಮತೆಣಿಕೆ ಬಗ್ಗೆ ಅವಲೋಕನ ನಡೆಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಅಂಚೆ ಮತಪತ್ರಕ್ಕಾಗಿ ಎರಡು ಸಭಾಂಗಣಗಳಲ್ಲಿ 26 ಟೇಬಲ್‍ಗಳನ್ನು ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‍ಗಳನ್ನು ಸ್ಥಾಪಿಸಲಾಗಿದೆ. ಮೇ 29ರೊಳಗೆ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟರ ವಿವರವನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಮತ ಎಣಿಕೆ ಕೇಂದ್ರಕ್ಕೆ ಬರುವ ವಾಹನಗಳ ಸಂಪೂರ್ಣ ವಿವರವನ್ನು ವಾಹನದ ಉಸ್ತುವಾರಿ ಹೊತ್ತಿರುವ ಮಂಜೇಶ್ವರಂ ತಹಶೀಲ್ದಾರ್ ಶಿಬು ಅವರಿಗೆ ಹಸ್ತಾಂತರಿಸಬೇಕು. ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಎಲ್ಲ ಜನರಿಗೆ ಕುಟುಂಬಶ್ರೀ ಊಟದ ವ್ಯವಸ್ಥೆ ಮಾಡಲಿದೆ. ಮತ ಎಣಿಕೆ ಕೇಂದ್ರವು ಸಂಪೂರ್ಣ ಮೊಬೈಲ್ ಮುಕ್ತ ವಲಯವಾಗಿರಲಿದ್ದು, ಮತ ಎಣಿಕೆ ಕೇಂದ್ರಕ್ಕೆ ಬರುವ ಎಲ್ಲ ನೌಕರರು ಹಾಗೂ ಏಜೆಂಟರಿಗೆ ವಿಶೇಷ ಗುರುತಿನ ಚೀಟಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತಹಶೀಲ್ದಾರರಾದ ಪಿ.ಶಿಬು, ಅಬೂಬಕರ್ ಸಿದ್ದೀಕ್, ಎಂ.ಮಾಯಾ, ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಪಿ. ಅಖಿಲ್, ಅಭ್ಯರ್ಥಿಗಳಾದ ವಿ. ಕೇಶವ ನಾಯ್ಕ್, ಅನೀಶ್ ಪಯ್ಯನ್ನೂರು, ಎನ್. ಬಾಲಕೃಷ್ಣನ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಮನೋಜ್ ಕುಮಾರ್, ಕೆ.ಪಿ.ಸತೀಶ್ಚಂದ್ರನ್, ಆರ್.ರಮೇಶ್, ಕೆ.ಎ.ಮಹಮ್ಮದ್‍ಹನೀಫ್, ಎಂ.ರಂಜಿತ್, ಅರ್ಜುನನ್ ತಾಯಲಂಗಡಿ, ವಿ.ರಾಜನ್, ಎಂ.ಕುಞಂಬು ನಂಬಿಯಾರ್, ಬಿ.ಎಂ.ಜಮಾಲ್ ಪಟೇಲ್, ಅಬ್ದುಲ್ಲಕುಞÂ ಚೆರ್ಕಳ ಮೊದಲಾದವರು ಭಾಗವಹಿಸಿದ್ದರು.