ಕಾಸರಗೋಡು: ಜಿಲ್ಲಾ ಪಂಚಾಯಿತಿ ಮೂಲಕ ಕೊಲ್ಲಂ ಜಿಲ್ಲೆಯಲ್ಲಿ ಜಾರಿಗೆ ತಂದ ಪಾಲಿಯೇಟಿವ್ ರೋಗಿಗಳ ಆಯುರ್ವೇದ ಚಿಕಿತ್ಸಾ ಯೋಜನೆ 'ಆಯುರ್ ಪಾಲಿಯಂ'ನ್ನು ಕಾಸರಗೋಡು ಜಿಲ್ಲೆಯಲ್ಲೂ ಜಾರಿಗೊಳಿಸುವಂತೆ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಂಐಎ) ಆಯುರ್ವೇದ ಮೆಡಿಕಲ್ ಅಸೋಸಿಯೇಶನ್ ಆಫ್ ಇಂಡಿಯಾ ಕಾಸರಗೋಡು ಜಿಲ್ಲಾ ಸಮಿತಿ ಸಭೆ ಆಗ್ರಹಿಸಿದೆ.
ರಾಷ್ಟ್ರೀಯ ಆಯುಷ್ ಮಿಷನ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆಗೆ ನಡೆಸುವ ಸಂದರ್ಶನದ ದಿನಾಂಕವನ್ನು ಪಿಎಸ್‍ಸಿ ನಿಯಮಾವಳಿಯಂತೆ 80:20 ಥಿಯರಿ ಸಂದರ್ಶನದ ದಿನಾಂಕವನ್ನು ಘೋಷಿಸಬೇಕು, ಅತ್ಯಂತ ಪಾರದರ್ಶಕ ಮತ್ತು ಶೀಘ್ರ ಶ್ರೇಣಿ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದೆ. ಪಾಲಕುನ್ನು ಬೇಕಲ್ ಪ್ಯಾಲೆಸ್‍ನ ಡಾ.ಎ.ಸದಾನಂದನಗರದಲ್ಲಿ ನಡೆದ ಸಮಾವೇಶವನ್ನು ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಪದ್ಮೇಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಶೀಬಾ ಎ.ಎಲ್. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೇ 30ರಂದು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಬೀಳ್ಕೊಡುಗೆ ಹಮ್ಮಿಕೊಳ್ಳಲಾಯಿತು. ರಾಜ್ಯ ಕಾರ್ಯದರ್ಶಿ ಡಾ.ಸಿರಿ ಸೂರಜ್ ಪಿ.ಸಿ. ಪ್ರಧಾನ ಭಾಷಣ ಮಾಡಿದರು. ಡಾ. ಅಖಿಲ್ ಮನೋಜ್, ಡಾ. ಸೀಮಾ ಜಿ.ಕೆ, ಡಾ. ರಂಜಿತ್ ಕೆ.ಆರ್, ಡಾ.ಶ್ರುತಿ ಪಂಡಿತ್.ಕೆ, ಡಾ.ದಿವ್ಯಾ.ಪಿ.ವಿ., ಡಾ.ಅಜಿತ್ ನಂಬಿಯಾರ್, ಡಾ.ಕುಮಾರನ್.ಕೆ, ಡಾ.ರಾಜೀವನ್.ವಿ, ಡಾ.ಪ್ರವೀಣ್ ಪಿ.ಆರ್, ಡಾ.ಪ್ರೇಮರಾಜ್.ಕೆ, ಡಾ.ಸಂದೀಪ್.ಕೆ, ಡಾ.ರಜಿತಾ.ಟಿ.ವಿ, ಡಾ. ಆಯಿಷತ್ ನಾಜಿಯಾ.ಸಿಐ., ಡಾ.ಅಖಿಲಾ ಕೃಷ್ಣನ್.ಕೆ. ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಡಾ.ಅಜಿತ್ ನಂಬಿಯಾರ್ ಅಧ್ಯಕ್ಷ, ಡಾ.ಶ್ರುತಿ ಪಂಡಿತ್.ಕೆ ಕಾರ್ಯದರ್ಶಿ, ಡಾ.ಕೃಷ್ಣಕುಮಾರ್.ಎಂ.ಕೆಕೋಶಾಧಿಕಾರಿ, ಮತ್ತು ಮತ್ತು ಡಾ.ಸೆಮಿನಾ.ಕೆ.(ಸಂಚಾಲಕಿ) ಆಯ್ಕೆಯಾದರು. ಮಹಿಳಾ ಸಮಿತಿ ಪದಾಧಿಕಾರಿಗಳಾಗಿ ಡಾ.ದೀಪಾ.ಎ ಅಧ್ಯಕ್ಷೆ, ಡಾ. ಸಎಮೀನಾ ಕೆ. ಅವರನ್ನು ಕನ್ವೀನರ್ ಆಗಿ ಆಯ್ಕೆ ಮಾಡಲಾಯಿತು.