ಕಾಸರಗೋಡು: 2023-24ನೇ ಸಾಲಿನ ಸಿಬಿಎಸ್‍ಇ ಹತ್ತು ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯ ಶೇ. ನೂರು ಫಲಿತಾಂಶ ದಾಖಲಿಸಿಕೊಂಡಿದೆ. ಹತ್ತನೇ ತರಗತಿ ಪರೀಕ್ಷೆಗೆ ಹಾಜರಾದ 99ಮಂದಿ ವಿದ್ಯಾರ್ಥಿಗಳಲ್ಲಿ 65ಮಂದಿ ಅತ್ಯುನ್ನತ ಶ್ರೇಣಿ ಹಾಗೂ 24ಮಂದಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ. 500ಅಂಕದಲ್ಲಿ 486 ಅಂಕ ಪಡೆದು ಪಾರ್ವತೀ ಅಜಯ್ ಶಾಲೆಯಲ್ಲಿ ಪ್ರಥಮ ಹಾಗೂ ಶಬೀರ್ ಶೆರೀಫ್478 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
12ನೇ ತರಗತಿಯಲ್ಲಿ ಪರೀಕ್ಷೆ ಬರೆದ 40 ಮಂದಿ ವಿದ್ಯಾರ್ಥಿಗಳಲ್ಲಿ 25 ಮಂದಿ ಡಿಸ್ಟಿಂಕ್ಷನ್, 15 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 500 ಅಂಕದಲ್ಲಿ 496 ಅಂಕ ಪಡೆದುಕೊಳ್ಳುವ ಮೂಲಕ ಕ್ಷಮಾಭಟ್ ಪ್ರಥಮ, ಆಶಿತ್ ರಆವ್ ಕೆ 484ಅಂಕಗಳೊಮದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.