ಪಾಲಕ್ಕಾಡ್: ಹಳೆಯ ದುಬಾರಿ ವರ್ಕ್‍ಶಾಪ್ ವ್ಯಾನ್‍ಗಳ ಬದಲಿಗೆ ಹೆಚ್ಚು ಪರಿಣಾಮಕಾರಿ ಮತ್ತು ಕಡಮೆ ವೆಚ್ಚದ ಮಿನಿ ವರ್ಕ್‍ಶಾಪ್ ವ್ಯಾನ್‍ಗಳನ್ನು ಅಳವಡಿಸಲು ಕೆಎಸ್‍ಆರ್‍ಟಿಸಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಮೂರು ವರ್ಷಗಳಲ್ಲಿ 50 ವ್ಯಾನ್‍ಗಳನ್ನು ಖರೀದಿಸಲಾಗುವುದು.
ಡೀಸೆಲ್‍ನಿಂದ ಚಲಿಸುವ ಹೊಸ ವ್ಯಾನ್‍ಗಳ ಖರೀದಿಯೊಂದಿಗೆ ಇಂಧನ ವೆಚ್ಚವನ್ನು ಗಣನೀಯವಾಗಿ ಕಡಮೆ ಮಾಡಬಹುದು ಎಂದು ತೀರ್ಮಾನಿಸಲಾಗಿದೆ. ಪ್ರಸ್ತುತ, ಕೆಎಸ್‍ಆರ್‍ಟಿಸಿ ಹಳೆಯ ಬಸ್‍ಗಳು ಸೇರಿದಂತೆ ವರ್ಕ್‍ಶಾಪ್ ವ್ಯಾನ್‍ಗಳನ್ನು ಮಾರ್ಪಡಿಸಲಿದೆ.
ಪ್ರತಿ ಲೀಟರ್ ಡೀಸೆಲ್‍ಗೆ ಗರಿಷ್ಠ ನಾಲ್ಕು ಕಿಲೋಮೀಟರ್ ಮೈಲೇಜ್ ನೀಡುವ ಈಗಿರುವ ನಮೂನೆಯ ವ್ಯಾನ್‍ಗಳ ನಿರ್ವಹಣೆಯು ಕೆಎಸ್‍ಆರ್‍ಟಿಸಿಗೆ ಹೆಚ್ಚಿನ ಹೊರೆಯಾಗಿದೆ. ಅಂತಹ ಸರ್ವಿಸ್ ವ್ಯಾನ್‍ಗಳು ಪಾಲಕ್ಕಾಡ್‍ನಿಂದ ಕೊಯಮತ್ತೂರಿಗೆ ಪ್ರಯಾಣಿಸಲು ಡೀಸೆಲ್‍ನಲ್ಲಿ 3,000 ರೂ.ವೆಚ್ಚವಾಗುತ್ತದೆ.
ವ್ಯಾನ್‍ಗಳು ಸಿಗದ ಕಡೆ ರಿಪೇರಿ ಮಾಡಲು ಮೆಕ್ಯಾನಿಕ್‍ಗಳು ಸರ್ವಿಸ್ ಬಸ್‍ಗಳನ್ನು ಆಶ್ರಯಿಸಬೇಕಾಗುವುದೂ ಮತ್ತೊಂದು ದೊಡ್ಡ ನಷ್ಟವಾಗುತ್ತದೆ.
ಹೊಸ ಮಿನಿ ವಾಹನವು ಚಾಲಕ ಮತ್ತು ಎರಡು ಮೆಕ್ಯಾನಿಕ್‍ಗಳಿಗೆ ಕ್ಯಾಬಿನ್ ಮತ್ತು ಉಪಕರಣಗಳನ್ನು ಸಂಗ್ರಹಿಸಲು ಸುತ್ತುವರಿದ ಕ್ಯಾರಿಯರ್‍ನೊಂದಿಗೆ ಇರಲಿದ್ದು, ಇವುಗಳು ಒರಟಾದ ಗುಡ್ಡಗಾಡು ರಸ್ತೆಗಳಲ್ಲಿಯೂ ಉತ್ತಮ ಮೈಲೇಜ್ ಮತ್ತು ಹೆಚ್ಚಿನ ವೇಗದೊಂದಿಗೆ 1,500 ಕೆಜಿ ತೂಕವನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿರುತ್ತವೆ. ಅಂತರರಾಜ್ಯ ಮಾರ್ಗಗಳಲ್ಲಿರುವ ಡಿಪೋಗಳಲ್ಲಿ ಇವುಗಳನ್ನು ಹೆಚ್ಚು ನಿಯೋಜಿಸಬಹುದಾಗಿದೆ. ಸ್ವಿಫ್ಟ್ ಬಸ್‍ಗಳು ಸಹ ಈ ಸೇವೆಯನ್ನು ಬಳಸಲಿವೆ.