ಬದಿಯಡ್ಕ: ಮನೆಯಲ್ಲಿ ಕುಸಿದು ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕುಂಬ್ಡಾಜೆ ಸನಿಹದ ಏತಡ್ಕ ನಿವಾಸಿ ರಾಧಾಕೃಷ್ಣ ಭಟ್ ಅವರ ಪುತ್ರ ಪ್ರಜ್ವಲ್(26)ಮೃತಪಟ್ಟಿದ್ದಾರೆ. ಕೃಷಿಕರಾಗಿದ್ದರು. ಇತ್ತೀಚೆಗೆ ಮನೆಯಲ್ಲಿ ಕುಸಿದು ಬಿದ್ದಿದ್ದ ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.