ನ್ಯೂಯಾರ್ಕ್: 2016ರ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ನೀಲಿಚಿತ್ರಗಳ ತಾರೆಗೆ ಹಣ ನೀಡಿದ್ದ (ಹಷ್ ಮನಿ) ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ಮಾಡಿದೆ.
ನ್ಯೂಯಾರ್ಕ್: 2016ರ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ನೀಲಿಚಿತ್ರಗಳ ತಾರೆಗೆ ಹಣ ನೀಡಿದ್ದ (ಹಷ್ ಮನಿ) ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ಮಾಡಿದೆ.
ನ್ಯೂಯಾರ್ಕ್‌ನ ಮ್ಯಾನಹಟನ್ ನ್ಯಾಯಾಲಯದ 11 ನ್ಯಾಯಾಧೀಶರ ಸಮಿತಿಯು ಗುರುವಾರ ಸರ್ವಾನುಮತದಿಂದ ಈ ತೀರ್ಪು ನೀಡಿದೆ.
ಈ ಮೂಲಕ ಟ್ರಂಪ್ ಮಾಡಿದ ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾದರು.
ನ್ಯಾಯಾಲಯ ಅವರಿಗೆ ನೀಡುವ ಶಿಕ್ಷೆ ಏನು ಎಂಬು ಆದೇಶ ಮುಂದಿನ ವಾರ ಹೊರಬೀಳಲಿದೆ ಎನ್ನಲಾಗಿದೆ. ಇದರೊಂದಿಗೆ ಡೊನಾಲ್ಡ್ ಟ್ರಂಪ್ ಅವರಿಗೆ ಜೈಲುಶಿಕ್ಷೆಗೆ ಗುರಿಯಾಗುವ ಆತಂಕ ಎದುರಾಗಿದೆ.
ಆದರೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಈಗಾಗಲೇ ಟ್ರಂಪ್ ಎಲ್ಲ ಸಿದ್ದತೆ ಮಾಡಿಕೊಂಡಿದ್ದಾರೆ. ಹಾಗಾಗಿ ಈ ತೀರ್ಪು ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಗೆ ನಿಲ್ಲುವುದನ್ನು ತಡೆಯಲಾಗುವುದಿಲ್ಲ ಎಂದು ವರದಿಯಾಗಿದೆ.
ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರು 'ನಾನು ಟ್ರಂಪ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ' ಎಂದು ಹೇಳಿದ್ದರು. 2016ರ ಚುನಾವಣೆ ವೇಳೆ ಈ ಬಗ್ಗೆ ಹೇಳಿಕೆ ನೀಡದೇ ಮೌನವಹಿಸಲು ನಟಿಗೆ ಭಾರಿ ಹಣ ನೀಡಲಾಗಿತ್ತು ಎಂಬ ಕುರಿತು ಪ್ರಕರಣ ದಾಖಲಾಗಿತ್ತು.
2016ರಲ್ಲಿ ಟ್ರಂಪ್ ಅವರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಮಿಚೆಲ್ ಕೊಹೇನ್ ಅವರು ನಟಿಗೆ 1.3 ಲಕ್ಷ ಡಾಲರ್ ಪಾವತಿಸಿದ್ದು ಹೇಗೆ ಮತ್ತು ಇದನ್ನು ಯಾವ ರೀತಿ ವಾಪಸು ಸ್ವೀಕರಿಸಿದ್ದು ಎಂಬ ಅಂಶವನ್ನು ಕುರಿತಂತೆಯೇ ಈಗಿನ ವಿಚಾರಣೆಯು ಒತ್ತು ನೀಡಿದೆ.