ಕಾಸರಗೋಡು: ಆಸ್ಪತ್ರೆಗೆ ತೆರಳುವ ಮಧ್ಯೆ ಹೆರಿಗೆನೋವು ಕಾಣಿಸಿಕೊಂಡು, ಮಹಿಳೆ ಆಟೋರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೊಸದುರ್ಗ ಕರಿಂದಳ ನಿವಾಸಿ ಯುವತಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಬಾಣಂತಿ ಮತ್ತು ಮಗುವನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಯಿತು.
ಕರಿಂದಳ ನಿವಾಸಿ, ತುಂಬು ಗರ್ಭಿಣಿಯನ್ನು ತಪಾಸಣೆಗಾಘಿ ಕಾಞಂಗಾಡು ಜಿಲ್ಲಾಸ್ಪತ್ರೆಗೆ ಆಟೋರಿಕ್ಷಾದಲ್ಲಿ ಸಾಗಿಸುವ ಮಧ್ಯೆ ಚೆಯ್ಯಾಂಗೋಡ್ ಕಿನಾವೂರ್ ಎಂಬಲ್ಲಿಗೆ ತಲುಪಿದಾಗ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಇವರನ್ನು ಸನಿಹದ ಹೆಲ್ತ್ ಕೇರ್ ಕ್ಲಿನಿಕ್ ಒಂದಕ್ಕೆ ಸಾಗಿಸುತ್ತಿದ್ದಂತೆ ಆಟೋರಿಕ್ಷಾದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಕ್ಲಿನಿಕ್‍ನಲ್ಲಿ ಕರ್ತವ್ಯದಲ್ಲಿದ್ದ ಡಾ. ಆದಿರಾ ಹಾಗೂ ಸ್ಟಾಫ್ ನರ್ಸ್ ಸೇರಿ ಮಹಿಳೆಯನ್ನು ಕ್ಲಿನಿಕ್‍ಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.