HEALTH TIPS

ರೈಲುಗಳ ಸೇವೆಯಲ್ಲಿ ಬದಲಾವಣೆ

            ಮಂಗಳೂರು: ಪಾಲಕ್ಕಾಡ್ ವಿಭಾಗದ ನೇತ್ರಾವತಿ ಕ್ಯಾಬಿನ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳಲ್ಲಿ ಟ್ರ್ಯಾಕ್ ನಿರ್ವಹಣಾ ಕಾರ್ಯಗಳನ್ನು ಸುಲಭಗೊಳಿಸಲು ವಿವಿಧ ದಿನಗಳಲ್ಲಿ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

           ಮಂಗಳೂರು ಸೆಂಟ್ರಲ್ - ನಾಗರ್‌ಕೋಯಿಲ್ ಜಂಕ್ಷನ್ ಪರಶುರಾಮ್ ಎಕ್ಸ್‌ಪ್ರೆಸ್ (ರೈಲು ನಂಬ್ರ16649) ಮೇ 29ರಂದು ಮಂಗಳೂರು ಸೆಂಟ್ರಲ್‌ನಿಂದ 1 ಗಂಟೆ 30 ನಿಮಿಷ ತಡವಾಗಿ ಬೆಳಗ್ಗೆ 6:35ಕ್ಕೆ ಹೊರಡಲಿದೆ.

                ಮಂಗಳೂರು ಸೆಂಟ್ರಲ್ - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ನಂಬ್ರ 22638) ರೈಲು ಮೇ 29 ರಂದು ಅರ್ಧ ಗಂಟೆ ತಡವಾಗಿ ರಾತ್ರಿ 1:15ಕ್ಕೆ ಮಂಗಳೂರು ಸೆಂಟ್ರಲ್ ಬದಲಿಗೆ ಉಳ್ಳಾಲ ನಿಲ್ದಾಣದಿಂದ ಪ್ರಯಾಣವನ್ನು ಪ್ರಾರಂಭಿಸಲಿದೆ. ಮಂಗಳೂರು ಸೆಂಟ್ರಲ್ ಮತ್ತು ಉಳ್ಳಾಲ ನಿಲ್ದಾಣದ ನಡುವೆ ಈ ರೈಲಿನ ಸೇವೆಯನ್ನು ರದ್ದುಗೊಳಿಸಲಾಗಿದೆ.

ಮಂಗಳೂರು ಸೆಂಟ್ರಲ್ - ಕೋಝಿಕ್ಕೋಡ್ ಎಕ್ಸ್‌ಪ್ರೆಸ್ ( ರೈಲು ನಂಬ್ರ 16610) ಪ್ರಯಾಣವು ಮೇ 25 ಮತ್ತು 29 , ಜೂನ್ 5 ಮತ್ತು 8 ರಂದು ಮಂಗಳೂರು ಅರ್ಧ ಗಂಟೆ ತಡವಾಗಿ ಉಳ್ಳಾಲ ನಿಲ್ದಾಣದಿಂದ ಪ್ರಯಾಣವನ್ನು ಪ್ರಾರಂಭಿ ಸಲಿದೆ. ಮಂಗಳೂರು ಸೆಂಟ್ರಲ್ ಮತ್ತು ಉಳ್ಳಾಲ ನಿಲ್ದಾಣದ ನಡುವೆ ಈ ರೈಲಿನ ಸೇವೆಯನ್ನು ರದ್ದುಗೊಳಿಸಲಾಗಿದೆ.

                ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಪ್ರಯಾಣವು ಮೇ 24 ಮತ್ತು 28 ರಂದು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ 1 ಗಂಟೆ 10 ನಿಮಿಷಗಳಷ್ಟು ತಡವಾಗಿ ಪ್ರಯಾಣ ಆರಂಭಿಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries