HEALTH TIPS

ಅರೆಕ್ಕಾಡಿ ಶ್ರೀಧೂಮಾವತೀ ಪರಿವಾರ ದೈವಗಳ ಜೀರ್ಣೊದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ಬಾಲಲಯ ಪ್ರತಿಷ್ಠೆ

              ಪೆರ್ಲ: ಕಾಟುಕುಕ್ಕೆ ಗ್ರಾಮದ ಅರೆಕ್ಕಾಡಿ ಎಂಬಲ್ಲಿ ಪ್ರಾಚೀನವಾಗಿ ಅಜೀರ್ಣವಾಸ್ಥೆಯಲಿದ್ದ ಅರೆಕ್ಕಾಡಿ ಶ್ರೀಧೂಮಾವತೀ ಪರಿವಾರ ದೈವಸ್ಥಾನ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಪುರಾತನವಾಗಿ ಇಲ್ಲಿನ ಏಳು ಪ್ರತಿಷ್ಠಿತ ಮನೆತನಗಳ ನೇತೃತ್ವದಲಿ ಆರಾಧನೆ ನಡೆಸಿಕೊಂಡು ಬರುತ್ತಿದ್ದ ದೈವ ಸಾನಿಧ್ಯದಲ್ಲಿ ಮೂರ್ನಾಲ್ಕು ದಶಕಗಳಿಂದ ಆರಾಧನೆ ಪರ್ವಗಳು ತಟಸ್ಥಗೊಂಡಿದ್ದು ಇದೀಗ ನಾಡಿನ ಸುಭಿಕ್ಷೆಗಾಗಿ ಊರವರು ಸೇರಿಕೊಂಡು ಇದನ್ನು ಪುನರ್ ನವೀಕರಿಸಿ ನಿರ್ಮಿಸಲು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. 


           ಇದರಂತೆ ವಿಜಾÐಪನ ಪತ್ರ ಬಿಡುಗಡೆ ಮತ್ತು ಬಾಲಲಯ ಪ್ರತಿಷ್ಠೆ ಕಾರ್ಯ ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಊರವರ ಸಹಭಾಗಿತ್ವದಲ್ಲಿ ಸಾನಿಧ್ಯ ಪರಿಸರದಲ್ಲಿ ನಡೆಯಿತು. ಈ ಬಗ್ಗೆ ನಡೆದ ಸಭೆಯಲ್ಲಿ ತಂತ್ರಿ ಸಹಾಯಕ ಆರ್ಚಕ ಶ್ರೀಧರ ಭಟ್ ವಾರಿಕ್ಕಾಡ್ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದರು. ಕಾಟುಕುಕ್ಕೆ ಕ್ಷೇತ್ರ ಆಡಳಿತ ಮೋಕ್ತೇಸರ ತಾರನಾಥ ರೈ ಪಡ್ಡoಬೈಲು ಗುತ್ತು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಿ.ಕೆ.ಭಟ್ ಪೂವಾಳೆ, ಗೌರವಸಲಹೆಗಾರ ನಾರಾಯಣ ಮಯ್ಯ, ನಾರಾಯಣ ಮವ್ವಾರು, ಅಧ್ಯಕ್ಷ ಗೋಪಾಲ ಮಣಿಯಾಣಿ ಕೋಲಾಯಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನ್ಯಾಯವಾದಿ ಚಂದ್ರಮೋಹನ್ ,ಮಹಿಳಾ ವಿಭಾಗ ಅಧ್ಯಕ್ಷೆ ಸುಶೀಲ ವಿ.ಕೆ, ಸಾಹಿತಿ ರಾಜಶ್ರೀ ಟಿ,ರೈ ಪೆರ್ಲ, ಸುಬ್ರಹ್ಮಣ್ಯ ಭಟ್, ಆನಂದ ಆಳ್ವ ಸಾರ್ಯ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಶಿವರಾಮ ಮಾಸ್ತರ್ ಸ್ವಾಗತಿಸಿ ನಿರೂಪಿಸಿದರು. ಜಯರಾಮ ಮಾಸ್ತರ್ ವಂದಿಸಿದರು. ಬಳಿಕ ಸುದರ್ಶನ ಹೋಮ,ವಿವಿಧ ಪ್ರಾಯಶ್ಚಿತ ಹೋಮಾದಿಗಳು, ಬಾಲಾಲಯ ಪ್ರತಿಷ್ಠಾ ಕಾರ್ಯ ಜರಗಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries