ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಷಟ್ಪಥ ಕಾಮಗಾರಿಯನ್ವಯ ಸಂಬಂಧಪಟ್ಟ ಇಲಾಖೆ ಹಾಗೂ ಗುತ್ತಿಗೆದಾರರು ಕೈಗೊಂಡಿರುವ ಮುಂಗಾರು ಪೂರ್ವ ವಿಪತ್ತು ಸಿದ್ಧತೆಯನ್ನು ಪರಿಶೀಲಿಸಲು ಜಿಲ್ಲೆಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರು ಚೆಂಗಳದಿಂದ ಮಟ್ಟಲಾಯಿ ವರೆಗಿನ ಪ್ರದೇಶಗಳಿಗೆ ಭೇಟಿ ನೀಡಿದರು.
ಮಳೆಗಾಲದಲ್ಲಿ ಜಲಾವೃತವಾಗುತ್ತಿರುವ ಹಾಗೂ ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿದರು. ಚೆಂಗಳ, ಚಟ್ಟಂಚಾಲ್, ಪೆÇಯಿನಾಚಿ, ಪುಲ್ಲೂರು ಸೇತುವೆ, ಚೆಮ್ಮಟ್ಟಂವಯಲ್, ಕಾರ್ಯಂಗೋಡ್ ಸೇತುವೆ, ವೀರಮಲಗುಡ್ಡೆ ಮತ್ತು ಮಟ್ಟಲಾಯಿ ಗುಡ್ಡದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.
ಚೆರ್ಕಳ ಪೇಟೆ ಸಣ್ಣ ಮಳೆಗೂ ಹೊಳೆಯಂತಾಗುತ್ತಿದ್ದು, ಮೇಲ್ಸೇತುವೆ ಕಾಮಗಾರಿಯಿಂದ ರಸ್ತೆಯಲ್ಲಿ ನೀರು ದಾಸ್ತಾನುಗೊಳ್ಳದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನೀರು ಹರಿಯುವ ನಾಲೆಗಳ ಕಾಮಗಾರಿ ಪೂರ್ಣಗೊಳಿಸಿ ಪ್ರಸ್ತುತ ದಾಸ್ತಾನುಗೊಲ್ಳುತ್ತಿರುವ ನೀರು ಹರಿದುಬಿಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಮಳೆ ನೀರನ್ನು ಚರಂಡಿ ಮೂಲಕ ಹರಿಯುವಂತೆ ಮಾಡಿ, ಸಂಚಾರಯೋಗ್ಯಗೊಳಿಸಲಾಗುವುದು ಎಂದು ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರು.
ಚೆರ್ಕಳ ಪುಲಿಕುಂಡು ರಾಷ್ಟ್ರೀಯ ಹೆದ್ದಾರಿಯ ಹೊರವಲಯದಲ್ಲಿ ವಾಸಿಸುವ ಕೇಳುಮಣಿಯಾಣಿ ಅವರ ದೂರಿನ ಬಗ್ಗೆ ಪರಿಗಣನೆ ನಡೆಸಿದ ಜಿಲ್ಲಾಧಿಕಾರಿ, ಕೇಳು ಮಣಿಯಾಣಿಯವರ ಕುಟುಂಬಕ್ಕೆ ಹಕ್ಕುಪತ್ರ ನೀಡುವಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಊಚಿಸಲಾಗುವುದು. ಅಲ್ಲದೆ ಕಾಮಗಾರಿಯಿಂದ ಮುಚ್ಚಿದ ಬಾವಿಗೆ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ದಕ್ಷಿಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ರಸ್ತೆ ಗುಂಡಿ ಬಿದ್ದಿರುವ ಎರಡು ಕುಟುಂಬಗಳ ದೂರನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ಸೂಚಿಸಿದರು. ಪೆÇಯಿನಾಚಿಯ ಕ್ಷೇತ್ರವೊಂದರ ಮುಂಭಾಗದಲ್ಲಿ ರಸ್ತೆ ನಿರ್ಮಾಣ ಮಾಡದಿರಲು ಹಾಗೂ ಇಲ್ಲಿ 9 ಮೀಟರ್ ವಿನ್ಯಾಸವನ್ನು ಬದಲಾಯಿಸುವ ಬಗ್ಗೆ ಗುತ್ತಿಗೆದಾರರ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ತಿಳಿಸಿದರು.