ನವದೆಹಲಿ: ನನ್ನ ಬಂಧನದ ಬೆನ್ನಲ್ಲೇ ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಬೀಳಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು, ಆದರೆ ಅದು ಸಫಲವಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದರು.
ನವದೆಹಲಿ: ನನ್ನ ಬಂಧನದ ಬೆನ್ನಲ್ಲೇ ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಬೀಳಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು, ಆದರೆ ಅದು ಸಫಲವಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದರು.
ಎಎಪಿ ಶಾಸಕರನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಬಂಧನದ ನಂತರ ಆಮ್ ಆದ್ಮಿ ಪಕ್ಷ ಹೆಚ್ಚು ಒಗ್ಗೂಡಿತು ಎಂದರು.
'ನನ್ನ ಬಂಧನಕ್ಕೂ ಮುನ್ನವೇ ಎಎಪಿ ಪಕ್ಷವನ್ನು ಒಡೆಯುತ್ತೇವೆ ಮತ್ತು ದೆಹಲಿ- ಪಂಜಾಬ್‌ನಲ್ಲಿ ಸರ್ಕಾರಗಳನ್ನು ಉರುಳಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಬಂಧನದ ನಂತರ ಉಭಯ ರಾಜ್ಯಗಳಲ್ಲಿ ಎಎಪಿ ಸರ್ಕಾರವನ್ನು ಉರುಳಿಸುವ ಗುರಿಯನ್ನೂ ಹೊಂದಿದ್ದರು. ಆದರೆ ಅದ್ಯಾವುದೂ ಫಲಿಸಲಿಲ್ಲ' ಎಂದರು.
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.