ತಿರುವನಂತಪುರ: ರಾಜ್ಯದ ಐ.ಎ.ಎಸ್ ಅಧಿಕಾರಿಗಳ ಸ್ಥಾನಗಳ ಜವಾಬ್ದಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ. ನಾಲ್ವರು ಐ.ಎ.ಎಸ್. ಅಧಿಕಾರಿಗಳಿಗೆ ಹೊಸ ಕರ್ತವ್ಯ ನೀಡಲಾಗಿದೆ.
ಬಿಜು ಪ್ರಭಾಕರ್ ಕೆ.ಎಸ್.ಇ.ಬಿ ಅಧ್ಯಕ್ಷರಾಗಿ ಹೊಸ ಜವಾಬ್ದಾರಿ ನೀಡಲಾಗುವುದು. ಕೆ.ಎಸ್.ಇ.ಬಿ ಅಧ್ಯಕ್ಷರಾಗಿದ್ದ ರಾಜನ್ ಖೋಬ್ರಗಡೆ ಆರೋಗ್ಯ ಇಲಾಖೆ ಕಾರ್ಯದರ್ಶಿಯಾಗಿ ಮರಳುವರು.
ಮುಹಮ್ಮದ್ ಹನೀಷ್ ಅವರು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುತ್ತಾರೆ. ಇದೇ ವೇಳೆ, ಬಿಜು ಪ್ರಭಾಕರ್ ಅವರು ಪ್ರಸ್ತುತ ಸಾರಿಗೆ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಕೆ. ವಾಸುಕಿಗೆ ಸರ್ಕಾರದ ನೋರ್ಕಾ ಕಾರ್ಯದರ್ಶಿ ಹುದ್ದೆಯನ್ನೂ ನಿರ್ವಹಿಸುವರು. ಪ್ರಸ್ತುತ, ಅವರು ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯದರ್ಶಿಯಾಗಿದ್ದಾರೆ.