ಕಾಸರಗೋಡು: ಎಡರಂಗ ಟ್ರೇಡ್ ಯೂನಿಯನ್, ಸೇವಾ ಸಂಘಟನೆಗಳ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ 'ಮೇ ಡೇ' ಆಚರಿಸಲಾಯಿತು. ಕಾಸರಗೋಡು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ವಠಾರದಿಂದ ಆರಂಭವಾದ ಮೇ ದಿನ ರ್ಯಾಲಿ, ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಸಮಾರೋಪಗೊಂಡಿತು.
ಈ ಸಂದರ್ಭ ನಡೆದ ಸಾಮಾನ್ಯ ಸಭೆಯನ್ನು ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಟಿ. ಕೆ. ರಾಜನ್ ಉದ್ಘಾಟಿಸಿದರು. ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ಟ್ರೇಡ್ ಯೂನಿಯನ್ ಮುಖಂಡರಾದ ಟಿ. ಕೃಷ್ಣನ್, ಸಿ. ಎಂ. ಎ.ಜಲೀಲ್, ವಕೀಲ ಸುರೇಶ್ ಬಾಬು, ಹನೀಫ ಕಡಪ್ಪುರ, ಕೆ. ಭಾಸ್ಕರನ್, ಕೆ. ರವೀಂದ್ರನ್, ಜಾನಕಿ, ಗಿರಿ ಕೃಷ್ಣನ್, ಸೇವಾ ಸಂಘಟನೆ ಮುಖಂಡರಾದ ಕೆಎಸ್‍ಟಿಎ ಪ್ರಕಾಶನ್ ಮಾಸ್ಟರ್, ಪ್ರತೀಶ್, ಎಲ್. I. ಸಿ. ಮುಖಂಡ ಅರವಿಂದನ್ , ಎನ್‍ಜಿಒ ಒಕ್ಕೂಟದ ಜಿಲ್ಲಾಧ್ಯಕ್ಷೆ ಶೋಭಾ ಉಪಸ್ಥಿತರಿದ್ದರು. ಸಿಐಟಿಯು ಕಾಸರಗೋಡು ಏರಿಯಾ ಕಾರ್ಯದರ್ಶಿ ಪಿ. ವಿ. ಕುಞಂಬು ಸ್ವಾಗತಿಸಿದರು.