ಕಾಸರಗೋಡು: ಬೇಕಲ ಪಳ್ಳಿಕ್ಕೆರೆ ತೆಕ್ಕೇಕುನ್ನು ತೆಕ್ಕೆವೀಡ್ ತರವಾಡಿನಲ್ಲಿ ಕುಟುಂಬ ಸಮ್ಮಿಲನವನ್ನು ಆಯೋಜಿಸಲಾಗಿತ್ತು. ಪಾಲಕುನ್ನು ಕಜಕಂ ಭಗವತಿ ದೇವಸ್ಥಾನದ ಅರ್ಚಕ ಸುನೀಶ ಭದ್ರದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತರವಾಡು ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಮುಂಡಿತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಪಾಲಕುನ್ನು ಭಗವತಿ ದೇವಸ್ಥಾನದಲ್ಲಿ ಮೂತ್ತ ಭಗವತಿಯ ನರ್ತಕರಾಗಿ 50 ವರ್ಷ ಪೂರೈಸಿದ ಆಯತ್ ರಾಜ ಅವರನ್ನು ಕಪ್ಪನಕ್ಕಲ್ ಕುಂಞÂ್ಞ ಕಣ್ಣನ್ ಸನ್ಮಾನಿಸಿದರು.
ದಕ್ಷಿಣ ವಲಯ ಸಮಿತಿ ಅಧ್ಯಕ್ಷ ದಾಮೋದರನ್ ಟಿ.ಕೆ., ಪ್ರಾದೇಶಿಕ ಸಮಿತಿ ಮಾಜಿ ಅಧ್ಯಕ್ಷ ಕುಮಾರನ್ ಜಾಲಿ, ವಾರ್ಡ್ ಸದಸ್ಯೆ ಅನಿತಾ, ತರವಾಡು ಮಾಜಿ ಅಧ್ಯಕ್ಷ ಕೃಷ್ಣನ್ ಕಲ್ಲಾರ್, ಸ್ಥಳೀಯ ಸಮಿತಿ ಸದಸ್ಯ ಸಜಿತ್ ಟಿ.ಕೆ ಮಾತನಾಡಿದರು. ವಿವಿಧ ಕಲಾ ಕಾರ್ಯಕ್ರಮಗಳು ನಡೆದವು. ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್‍ಟು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತರವಾಡು ಸಮಿತಿ ಕಾರ್ಯದರ್ಶಿ ಚಂದ್ರನ್ ವೆಳ್ಳಿಕ್ಕೋತ್ ಸ್ವಾಗತಿಸಿ, ಕೋಶಾಧಿಕಾರಿ ಮಣಿಕಂಠನ್ ವೆಂಗಾಡ್ ವಂದಿಸಿದರು.