ಹೈದರಾಬಾದ್: ಮಕ್ಕಳನ್ನು ಕದ್ದು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಗ್ಯಾಂಗ್ ಒಂದನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
13 ಮಕ್ಕಳನ್ನು ರಕ್ಷಿಸಿರುವ ರಾಚಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಿದ್ದಾರೆ.
'ಮಕ್ಕಳ ಕಳ್ಳತನದ ಗ್ಯಾಂಗ್ ತೆಲಂಗಾಣದಲ್ಲಿ ಸಕ್ರಿಯ ಆಗಿರುವ ದೂರಿನ ಜಾಡು ಹಿಡಿದು ತನಿಖೆ ನಡೆಸಲಾಗಿತ್ತು.
'ರಕ್ಷಿಸಲಾಗಿರುವ ಮಕ್ಕಳಲ್ಲಿ ನಾಲ್ಕು ಗಂಡು ಹಾಗೂ ಒಂಬತ್ತು ಹೆಣ್ಣು ಸೇರಿವೆ. ಆರೋಪಿಗಳು ದೆಹಲಿ, ಪುಣೆಯಲ್ಲಿ ಸಕ್ರಿಯರಾಗಿರುವ ಮಕ್ಕಳ ಕಳ್ಳತನದ ಗ್ಯಾಂಗ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಅಲ್ಲಿಂದ ಇವರು ಸುಮಾರು 50 ಮಕ್ಕಳನ್ನು ಕದ್ದು ಮಾರಾಟ ಮಾಡಿದ್ದಾರೆ. ಕದ್ದ ಮಕ್ಕಳನ್ನು ತೆಲಂಗಾಣ ಸೇರಿದಂತೆ ಬೇರೆ ಬೇರೆ ಕಡೆ ಮಕ್ಕಳಿಲ್ಲದವರಿಗೆ ಲಕ್ಷಾಂತರ ರೂಪಾಯಿ ತೆಗೆದುಕೊಂಡು ಮಾರಾಟ ಮಾಡುತ್ತಿದ್ದರು' ಎಂದು ತಿಳಿಸಿದ್ದಾರೆ.
ರಕ್ಷಿಸಲಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಘಟಕದಲ್ಲಿ ಇರಿಸಲಾಗಿದ್ದು ವಿಸ್ತೃತ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.