ಕಾಸರಗೋಡು: ಬಿಸಿಲಿನ ಆಘಾತದಿಂದ ಕುಸಿದು ಬಿದ್ದು, ಕೂಲಿ ಕಾರ್ಮಿಕ ಹಾವೇರಿ ಜಿಲ್ಲೆಯ ಸಾವನ್ನೂರು ತಾಲೂಕಿನ ಶಿರಿಬಿದಿಗೆ ನಿವಾಸಿ ರುದ್ರಪ್ಪ ಲಮಾಣಿ(45)ಮೃತಪಟ್ಟಿದ್ದಾರೆ. ಕಾಸರಗೋಡು ಜೆ.ಪಿ ಕಾಲನಿಯ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿದ್ದ ಇವರು, ಕ್ವಾಟ್ರಸ್ ಸನಿಹದ ರಸ್ತೆಬದಿ ಗಂಭೀರಾವಸ್ಥೆಯಲ್ಲಿ ಬಿದ್ದಿದ್ದು, ತಕ್ಷಣ ಇವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ರುದ್ರಪ್ಪ ಲಮಾಣಿ ಕಳೆದ ಒಂಬತ್ತು ವರ್ಷಗಳಿಂದ ನಿರ್ಮಾಣ ಕಾಮಗಾರಿಯಲ್ಲಿ ದುಡಿಯುತ್ತಿದ್ದರು. ಮರಣೋತ್ತರ ವರದಿ ಲಭಿಸಿದ ನಂತರವಷ್ಟೆ ಸಾವಿಗೆ ಕಾರಣ ಸ್ಪಷ್ಟಗೊಳ್ಳಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಕೇರಳದಲ್ಲಿ ಬಿಸಿಲಿನ ಆಘಾತಕ್ಕೆ ಮೂವರು ಬಲಿಯಾಗಿದ್ದಾರೆ. ಕಾಸರಗೋಡಿನಲ್ಲಿ ಆರೋಗ್ಯ ಇಲಾಖೆ ಜಾಗ್ರತಾ ನಿರ್ದೇಶ ನೀಡಿದ್ದು, ಆರೋಗ್ಯ ಇಲಾಖೆ ನೀಡಿರುವ ನಿರ್ದೇಶಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.