HEALTH TIPS

Covishield ಅಷ್ಟೇ ಅಲ್ಲ Covaxin ಲಸಿಕೆಯಿಂದಲೂ ಅಡ್ಡ ಪರಿಣಾಮ ಇದೆ: ಹೊಸ ಅಧ್ಯಯನ

            ನವದೆಹಲಿ: ಕೋವಿಶೀಲ್ಡ್ ಅಡ್ಡಪರಿಣಾಮದ ಸುದ್ದಿ ಹಸಿರಾಗಿರುವಂತೆಯೇ ಇತ್ತ ಭಾರತದಲ್ಲಿ ವ್ಯಾಪಕವಾಗಿ ನೀಡಲಾಗಿದ್ದ ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮಗಳು ಇವೆ ಎಂಬ ಸ್ಫೋಟಕ ಅಂಶವನ್ನು ನೂತನ ಅಧ್ಯಯನವೊಂದು ಹೊರಹಾಕಿದೆ.

            ಕೊರೋನಾ ವೈರಸ್‌(Corona Virus) ಎದುರಿಸಲು ತೆಗೆದುಕೊಂಡಿರುವ ಕೋವಿಶೀಲ್ಡ್‌(Covishield Vaccine) ಲಸಿಕೆ ಅಡ್ಡಪರಿಣಾಮ(Side Effects) ಹೊಂದಿದೆ ಎಂಬುದು ಬಯಲಾದ ಬೆನ್ನಲ್ಲಿ ಕೋವಾಕ್ಸಿನ್‌ (Covaxin) ತೆಗೆದುಕೊಂಡಿರುವ ಜನ ತಮಗೇನು ಅಪಾಯವಿಲ್ಲ ಎಂದು ನಿರಾಳವಾಗಿದ್ದರು. ಆದರೆ ಇದೀಗ ವರದಿಯೊಂದು ಹೊರಬಿದ್ದಿದ್ದು, ಕೋವಾಕ್ಸಿನ್‌ ಲಸಿಕೆಯೂ ಅಡ್ಡಪರಿಣಾಮ ಹೊಂದಿದೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.

                ಇತ್ತೀಚೆಗೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಬ್ರಿಟಿಷ್ ಕಂಪನಿಯಾದ ಅಸ್ಟ್ರಾಜೆನೆಕಾ ಇತ್ತೀಚೆಗೆ ಅಲ್ಲಿನ ನ್ಯಾಯಾಲಯದಲ್ಲಿ ಅದರ ಲಸಿಕೆ ಕೆಲವು ಜನರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು. ಇದೀಗ ಅದೇ ರೀತಿ ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್’ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ವರದಿ ಬಂದಿದೆ.


                             ವರ್ಷದ ನಂತರ ಕೋವ್ಯಾಕ್ಸಿನ್ ಅಡ್ಡ ಪರಿಣಾಮ: BHU ಅಧ್ಯಯನ

            ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದ ಸುಮಾರು ಒಂದು ವರ್ಷದ ನಂತರ, ಅದರ ಅಡ್ಡಪರಿಣಾಮಗಳು ಸಾಕಷ್ಟು ಜನರಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಈ ವರದಿಯ ಪ್ರಕಾರ, ಕೊವಾಕ್ಸಿನ್‌ ತೆಗೆದುಕೊಂಡಿರುವ ಹದಿ ಹರೆಯದವರು ಮತು ಯುವಕರಲ್ಲಿ ಈ ಅಡ್ಡ ಪರಿಣಾಮ ಹೆಚ್ಚಾಗಿ ಕಂಡು ಬಂದಿದೆ.

               ಈ ಸಂಶೋಧನೆಗಾಗಿ ಒಟ್ಟು 1024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 635 ಹದಿಹರೆಯದವರು ಮತ್ತು 391 ಯುವಕರು ಇದ್ದರು. 304 ಹದಿಹರೆಯದವರು ಅಥವಾ ಸುಮಾರು 48 ಪ್ರತಿಶತದಷ್ಟು ಜನರು ಶ್ವಾಸನಾಳದ ಸೋಂಕಿಗೆ ತುತ್ತಾಗಿರುವುದು ಅಧ್ಯಯನದಲ್ಲಿ ಬಯಲಾಗಿದೆ ಎಂದು ಹೇಳಲಾಗಿದೆ.

            ‘ಹೊಸ-ಆರಂಭದ ಚರ್ಮ ಮತ್ತು ಸಬ್ಕ್ಯುಟೇನಿಯಸ್ ಅಸ್ವಸ್ಥತೆ’ 10.5 ಪ್ರತಿಶತ ಹದಿಹರೆಯದವರಲ್ಲಿ ಕಂಡುಬಂದಿದ್ದು, ಸಾಮಾನ್ಯ ಅಸ್ವಸ್ಥತೆ ಅಂದರೆ ಸಾಮಾನ್ಯ ಸಮಸ್ಯೆ 10.2 ಪ್ರತಿಶತ, ನರಮಂಡಲದ ಅಸ್ವಸ್ಥತೆ ಅಂದರೆ ನರ ಸಂಬಂಧಿತ ಸಮಸ್ಯೆ 4.7 ಪ್ರತಿಶತ. ಅದೇ ರೀತಿ ಶೇ.8.9ರಷ್ಟು ಯುವಜನರಲ್ಲಿ ಸಾಮಾನ್ಯ ಸಮಸ್ಯೆಗಳು, ಮಸ್ಕ್ಯುಲೋಸ್ಕೆಲಿಟಲ್ ಡಿಸಾರ್ಡರ್ಸ್ ಅಂದರೆ ಸ್ನಾಯುಗಳು, ನರಗಳು, ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಶೇ.5.8ರಷ್ಟು ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಶೇ.5.5ರಲ್ಲಿ ಕಂಡುಬರುತ್ತವೆ ಎನ್ನಲಾಗಿದೆ.

ಮಹಿಳೆ-ಯುವತಿಯರಲ್ಲೂ ಅಡ್ಡ ಪರಿಣಾಮ

                 ಇನ್ನು ಕೋವಾಕ್ಸಿನ್ ಅಡ್ಡಪರಿಣಾಮಗಳು ಯುವತಿಯರಲ್ಲಿಯೂ ಕಂಡುಬಂದಿದ್ದು, 4.6 ರಷ್ಟು ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳು ವರದಿಯಾಗಿವೆ ಮತ್ತು 2.7 ಪ್ರತಿಶತದಷ್ಟು ಮಹಿಳೆಯರಲ್ಲಿ ಕಣ್ಣಿನ ಸಮಸ್ಯೆಗಳನ್ನು ತೋರಿಸಿದೆ. 0.6 ರಷ್ಟು ಜನರಲ್ಲಿ ಹೈಪೋಥೈರಾಯ್ಡಿಸಮ್ ಕಂಡುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries