HEALTH TIPS

ಚುನಾವಣಾ ಪ್ರಚಾರ ಮತದಾರರಿಗೆ ಮಾದರಿಯಾಗುವಂತಿರಲಿ, ದೇಶ ವಿಭಜಿಸುವಂತಲ್ಲ: EC

         ವದೆಹಲಿ: ತಾರಾ ಪ್ರಚಾರಕರ ಚುನಾವಣಾ ಭಾಷಣಗಳ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಚುನಾವಣಾ ಆಯೋಗ, ಜಾತಿ, ಸಮುದಾಯ, ಭಾಷೆ ಮತ್ತು ಧರ್ಮದ ಆಧಾರದ ಮೇಲೆ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಹೇಳಿದೆ.

          'ಚುನಾವಣೆ ಪ್ರಕ್ರಿಯೆಯ ಇರುವುದು ರಾಜಕೀಯ ಪಕ್ಷಗಳಿಗೆ ಗೆಲ್ಲಲು ಮಾತ್ರವಲ್ಲ. ಮತದಾರರಿಗೆ ತಮ್ಮ ಆದರ್ಶವನ್ನು ಪ್ರಸ್ತುತಪಡಿಸಲು ಹಾಗೂ ಭರವಸೆಗಳನ್ನು ಮೂಡಿಸಲು ಇರುವುದಾಗಿದೆ' ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣಾ ಆಯೋಗ ತಿಳಿಸಿದೆ.

          'ಚುನಾವಣೆಗಾಗಿ ದೇಶದ ಸಾಮಾಜಿಕ-ಸಾಂಸ್ಕೃತಿಕ ಪರಿಸರವನ್ನು ಬಲಿಪಶು ಮಾಡಬಾರದು. ತಾರಾ ಪ್ರಚಾರಕರ ಮಾತುಗಳು ಸಮಾಜದಲ್ಲಿ ಹಾನಿ ಮಾಡುವ ಸಾಧ್ಯತೆಯಿದೆ. ಉಭಯ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ತಮ್ಮ ತಾರಾ ಪ್ರಚಾರಕರಿಗೆ ತಮ್ಮ ಭಾಷಣವವನ್ನು ಸರಿಪಡಿಸಿಕೊಳ್ಳುವಂತೆ, ಮುಂದಿನ ದಿನಗಳಲ್ಲಿ ತಪ್ಪು ಮರುಕಳಿಸದಂತೆ ಕಾಳಜಿ ವಹಿಸಬೇಕಿದೆ' ಎಂದು ತಿಳಿಸಿದೆ.

            ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಪರಸ್ಪರ ದ್ವೇಷವನ್ನು ಉಂಟುಮಾಡುವ, ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವ, ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಿಸುವಂತ ಹೇಳಿಕೆಗಳನ್ನು ನೀಡದಂತೆ ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಪಾಲಿಸುವಂತೆ ಎಲ್ಲ ತಾರಾ ಪ್ರಚಾರಕರಿಗೆ ಸೂಚಿಸುವಂತೆಯೂ ತಿಳಿಸಿದೆ.

         ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾಷಣ ಮಾಡುವ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಏಪ್ರಿಲ್ 25ರಂದು ನೋಟಿಸ್ ಜಾರಿ ಮಾಡಿತ್ತು.

            ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಪ್ರತಿಪಕ್ಷ ಕಾಂಗ್ರೆಸ್‌ನ ಆರೋಪದ ಮೇಲೆ ನಡ್ಡಾ ಅವರಿಗೆ ನೋಟಿಸ್ ನೀಡಲಾಗಿತ್ತು. ಆಯೋಗದ ನೋಟಿಸ್‌ಗೆ ನೀಡಿದ ಉತ್ತರದಲ್ಲಿ, ಮೋದಿ ಅವರ ಹೇಳಿಕೆಯಲ್ಲಿ ಕಾಂಗ್ರೆಸ್‌ನ ದುರುದ್ದೇಶವನ್ನು ರಾಷ್ಟ್ರದ ಎದುರು ಬಯಲಿಗೆಳೆಯುವ ಉದ್ದೇಶ ಹೊಂದಿತ್ತು ಎಂದು ನಡ್ಡಾ ಸಮರ್ಥಿಸಿಕೊಂಡಿದ್ದರು.

'ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ಮತ್ತು ಇಂಡಿಯಾ ಬಣ ಒಂದು ರಾಷ್ಟ್ರವಾಗಿ ಭಾರತವನ್ನು, ಅದರ ಅಸ್ತಿತ್ವವನ್ನು ಮತ್ತು ಮೂಲ ಹಿಂದೂ ಧರ್ಮವನ್ನು ವಿರೋಧಿಸಲು ಪ್ರಾರಂಭಿಸಿವೆ' ಎಂದೂ ಹೇಳಿದ್ದರು.

            ನಡ್ಡಾ ಸಮರ್ಥನೆಯನ್ನು ತೃಪ್ತಿಕರವಾಗಿಲ್ಲ ಎಂದು ತಿಳಿಸಿರುವ ಆಯೋಗ, ಧಾರ್ಮಿಕ ಮತ್ತು ಕೋಮು ಆಧಾರದ ಮೇಲೆ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ತಮ್ಮ ತಾರಾ ಪ್ರಚಾರಕರಿಗೆ ಸೂಚಿಸುವಂತೆ ತಿಳಿಸಿದೆ.

                ಖರ್ಗೆ ಅವರ ಸಮರ್ಥನೆಯನ್ನು ಅಲ್ಲಗೆಳೆದಿರುವ ಆಯೋಗ, ರಕ್ಷಣಾ ಪಡೆಗಳನ್ನು ರಾಜಕೀಯಗೊಳಿಸಿದಂತೆ ತಿಳಿಸಿದೆ. ಅಲ್ಲದೇ ಅಗ್ನಿಪಥ್ ಯೋಜನೆ ಕುರಿತು ಕಾಂಗ್ರೆಸ್ ನಾಯಕರು ಮಾಡಿದ ಟೀಕೆಗಳನ್ನು ಅದು ಉಲ್ಲೇಖಿಸಿದೆ. ಅಲ್ಲದೇ ಸಂವಿಧಾನದ ಕುರಿತು ತಪ್ಪು ಅಭಿಪ್ರಾಯಗಳನ್ನು ರವಾನಿಸದಂತೆ ತಾರಾ ಪ್ರಚಾರಕರಿಗೆ ತಿಳಿಸುವಂತೆ ನಿರ್ದೇಶಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries