ಗೂಗಲ್ ವಾಲೆಟ್ ಆಪ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸಲು ಅಪ್ಲಿಕೇಶನ್ ಸಹಾಯ ಮಾಡುತ್ತದೆ. ದೇಶದ ಆಂಡ್ರಾಯ್ಡ್ ಬಳಕೆದಾರರಿಗೆ ವ್ಯಾಲೆಟ್ ಅಪ್ಲಿಕೇಶನ್ ಲಭ್ಯವಿರುತ್ತದೆ.
ಲಾಯಲ್ಟಿ ಕಾರ್ಡ್‍ಗಳು, ಟ್ರಾನ್ಸಿಟ್ ಪಾಸ್‍ಗಳು, ಡಿಜಿಟಲ್ ಕಾರ್ ಕೀಗಳು, ಚಲನಚಿತ್ರ ಟಿಕೆಟ್‍ಗಳು ಮತ್ತು ಬಹುಮಾನ ಕಾರ್ಡ್‍ಗಳನ್ನು ಸಂಗ್ರಹಿಸಲು ಗೂಗಲ್ ವಾಲೆಟ್ ನಿಮಗೆ ಅನುಮತಿಸುತ್ತದೆ.
ಯುಪಿಐ- ಆಧಾರಿತ ಗೂಗಲ್ ಪೇ ಗಿಂತ ಭಿನ್ನವಾಗಿ, ಗೂಗಲ್ ವಾಲೆಟ್ ಎಂಬುದು ಸಂಪರ್ಕರಹಿತ ಪಾವತಿಗಳನ್ನು ಮಾತ್ರ ಗುರಿಪಡಿಸುವ ಅಪ್ಲಿಕೇಶನ್ ಆಗಿದೆ. ಇದು ಕ್ರೆಡಿಟ್/ಡೆಬಿಟ್ ಕಾರ್ಡ್‍ಗಳನ್ನು ಬಳಸಿಕೊಂಡು ಸುರಕ್ಷಿತ ಸಂಪರ್ಕರಹಿತ ಪಾವತಿಗಳನ್ನು ಸಹ ಅನುಮತಿಸುತ್ತದೆ. ಗೂಗಲ್ ವಾಲೆಟ್ ನಿಯರ್‍ಫೀಲ್ಡ್ ಸಂವಹನ ಹೊಂದಿರುವ ಪೋನ್‍ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.
ಗೂಗಲ್ ಪೇ ಅನ್ನು ಸ್ವೀಕರಿಸುವ ಅಂಗಡಿಗಳಲ್ಲಿ ತ್ವರಿತ ಪಾವತಿಗಳಿಗಾಗಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‍ಗಳನ್ನು ಗೂಗಲ್ ವಾಲೆಟ್ ನಲ್ಲಿ ಸಂಗ್ರಹಿಸಬಹುದು. ನಿಜವಾದ ಕಾರ್ಡ್ ಸಂಖ್ಯೆಯನ್ನು ವ್ಯಾಪಾರಿಯೊಂದಿಗೆ ಎಂದಿಗೂ ಹಂಚಿಕೊಳ್ಳಲಾಗುವುದಿಲ್ಲ. ಪಿವಿಆರ್ ಐನಾಕ್ಸ್, ಮೇಕ್ ಮೈ ಟ್ರಿಪ್, ಏರ್ ಇಂಡಿಯಾ, ಶಾಪರ್ಸ್ ಸ್ಟಾಪ್ ಮತ್ತು ಬಿಎಂಡಬ್ಲ್ಯು ಸೇರಿದಂತೆ 20 ಕಂಪನಿಗಳು ವಾಲೆಟ್‍ಗಾಗಿ ಗೂಗಲ್‍ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ. ಭವಿಷ್ಯದಲ್ಲಿ ಇನ್ನಷ್ಟು ಸಂಸ್ಥೆಗಳು ಭಾಗವಹಿಸಲಿವೆ. ಆದರೆ ಭಾರತದಲ್ಲಿನ ಗೂಗಲ್ ಪೇ ವಾಲೆಟ್ ನಲ್ಲಿ ಹಣದ ವಹಿವಾಟು ಮಾಡುವ ಸೌಲಭ್ಯ ಲಭ್ಯವಿರುವುದಿಲ್ಲ.
ಗೂಗಲ್ ಪ್ಲೇ ಸ್ಟೋರ್ ನಿಂದ ಗೂಗಲ್ ವಾಲೆಟ್ ಡೌನ್‍ಲೋಡ್ ಮಾಡಬಹುದಾಗಿದೆ. ವ್ಯಾಲೆಟ್ ಅಪ್ಲಿಕೇಶನ್ ಭಾರತದಲ್ಲಿ ಮಾರಾಟವಾಗುವ ಪಿಕ್ಸೆಲ್ ಪೋನ್‍ಗಳಲ್ಲಿ ಮೊದಲೇ ಲೋಡ್ ಆಗಿರುತ್ತದೆ.