ಪೆರ್ಲ : ಕುಟುಂಬಶ್ರೀ ಜಿಲ್ಲಾ ಮಿಷನ್ ನ ವತಿಯಿಂದ ನಡೆಸಲ್ಪಟ್ಟ "ಅರಂಙï -24" ಮಂಜೇಶ್ವರ ತಾಲೂಕು ಮಟ್ಟದ ಕುಟುಂಬಶ್ರೀ ಕಲೋತ್ಸವ ಪೆರ್ಲ ಭಾರತೀ ಸದನದಲ್ಲಿ ದ್ವಿದಿನಗಳಲ್ಲಾಗಿ ನಡೆದು ಸಂಪನ್ನಗೊಂಡಿತು.
ಇದರ ವಿವಿಧ ಸ್ಪರ್ಧೆಗಳಲ್ಲಿ 110 ಅಂಕಗಳೊಂದಿಗೆ ಮಂಗಲ್ಪಾಡಿ ಸಿಡಿಎಸ್ ಪ್ರಥಮ, ವರ್ಕಾಡಿ ದ್ವಿತೀಯ, ಕಲೋತ್ಸವದ ಅತಿಥೇಯತ್ವ ವಹಿಸಿದ ಎಣ್ಮಕಜೆ ತೃತೀಯ ಬಹುಮಾನ ಗಳಿಸಿಕೊಂಡಿತು. ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಪಂಚಾಯತಿ ಸಹಾಯಕ ಕಾರ್ಯದರ್ಶಿ ಗಿರೀಶ್, ಕುಟುಂಬಶ್ರೀ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಕೆ.ವಿ. ಲಿಜಿನ್, ಬ್ಲಾಕ್ ಸಂಯೋಜಕ ಸಚಿನ್ ರಾಜ್, ಆದಿರಾ, ರೇಷ್ಮಾ, ಅನುಶ್ರೀ,ರೆಜಿನಾ, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲ ಸ್ವರ್ಗ, ಸಿಡಿಎಸ್ ಸದಸ್ಯೆಯರು ಕಾರ್ಯಕ್ರಮದ ಯಶಸ್ವಿಗೆ ನೇತೃತ್ವ ನೀಡಿದ್ದರು.