ದಿರ್ ಅಲ್-ಬಲಾಹ: ಇಸ್ರೇಲ್ ಗುರಿಯಾಗಿಸಿಕೊಂಡು ಹಮಾಸ್ ಭಾನುವಾರ ರಾಕೆಟ್ ದಾಳಿ ನಡೆಸಿದ್ದು, ಟೆಲ್‌ಅವಿವ್‌ನಲ್ಲಿ ವೈಮಾನಿಕ ದಾಳಿಯ ಸೈರನ್‌ಗಳು ಮೊಳಗಿದವು.
ದಿರ್ ಅಲ್-ಬಲಾಹ: ಇಸ್ರೇಲ್ ಗುರಿಯಾಗಿಸಿಕೊಂಡು ಹಮಾಸ್ ಭಾನುವಾರ ರಾಕೆಟ್ ದಾಳಿ ನಡೆಸಿದ್ದು, ಟೆಲ್‌ಅವಿವ್‌ನಲ್ಲಿ ವೈಮಾನಿಕ ದಾಳಿಯ ಸೈರನ್‌ಗಳು ಮೊಳಗಿದವು.
ಜನವರಿಯಿಂದ ಈಚೆಗೆ ಹಮಾಸ್ ನಡೆಸಿದ ದೀರ್ಘ ದಾಳಿ ಇದಾಗಿದ್ದರೂ, ಯಾವುದೇ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿ ದಾಖಲಾಗಿಲ್ಲ.
ಹಮಾಸ್‌ನ ಮಿಲಿಟರಿ ವಿಭಾಗವು ಈ ದಾಳಿಯನ್ನು ನಡೆಸಿರುವುದಾಗಿ ಹೇಳಿಕೊಂಡಿದೆ.
'ಸೇನೆಯು ಈಚೆಗೆ ದಾಳಿ ನಡೆಸಿದ ದಕ್ಷಿಣ ಗಾಜಾದ ರಫಾ ಪ್ರದೇಶದಿಂದ ಉಡಾವಣೆಯಾಗಿರುವ ಎಂಟು ಸ್ಫೋಟಕಗಳು ದೇಶ ಪ್ರವೇಶಿಸಿದ್ದು, ಹಲವು ರಾಕೆಟ್‌ಗಳನ್ನು ಗಡಿಯಲ್ಲೇ ನಿಷ್ಕ್ರಿಯಗೊಳಿಸಲಾಗಿದೆ' ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಮಾನವೀಯ ನೆರವು ಹೊತ್ತು ಬಂದಿರುವ ಟ್ರಕ್‌ಗಳಿಗೆ ಪ್ರವೇಶಾವಕಾಶ ನೀಡಲಾಗಿದೆ ಎಂದು ಇಸ್ರೇಲ್ ಹೇಳಿದೆ.