HEALTH TIPS

Jio Space Fiber: ಜಿಯೋ ಶೀಘ್ರದಲ್ಲೇ DTH ಮಾದರಿಯಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸುವ ನಿರೀಕ್ಷೆ!

 ಭಾರತದ ಅತಿದೊಡ್ಡ ಮತ್ತು ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಊಹಿಸಲು ಸಾಧ್ಯವಿಲ್ಲದ ಹೊಸ ಮಾದರಿಯ ಇಂಟರ್ನೆಟ್ ಸೇವೆಯನ್ನು ಪರಿಚಯಿಸಲು ಸಜ್ಜಾಗಿದೆ. ಇದನ್ನು ಕಂಪನಿ ಜಿಯೋ ಸ್ಪೇಸ್ ಫೈಬರ್ (Jio Space Fiber) ಎಂದು ಹೆಸರಿಸಿದ್ದು ಇದೊಂದು ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸಂಪರ್ಕ ಟೆಕ್ನಾಲಜಿಯಾಗಿದೆ.

ಜಿಯೋ ಶೀಘ್ರದಲ್ಲೇ DTH ಮಾದರಿಯಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ

ಜಿಯೋ ಲೇಟೆಸ್ಟ್ ಸ್ಯಾಟಲೈಟ್ ಆಧಾರಿತ Jio Space Fiber ಇಂಟರ್ನೆಟ್ ಸೇವೆ ಆರಂಭಿಸುವ ನಿರೀಕ್ಷೆಗಳಿವೆ. ಹೊಸ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ (IMC 2023) ರಿಲಯನ್ಸ್ ಜಿಯೋದ ಚೆರ್‌ಮ್ಯಾನ್ ಆಕಾಶ್ ಅಂಬಾನಿ ಪ್ರದರ್ಶಿಸಿದರು. ಪ್ರಸ್ತುತ ಈ ಸೇವೆ ದೇಶದ 4 ಸ್ಥಳಗಳಲ್ಲಿ ಪರೀಕ್ಷಿಸುತ್ತಿದೆ. ಇದರಿಂದ ಏನಪ್ಪಾ ಪ್ರಯೋಜನ ಅಂದರೆ ಇಂದಿನ ಟೆಲಿಕಾಂ ಟವರ್ ನೆಟ್ವರ್ಕ್ ಬರದ ಕಡೆಯಲ್ಲೂ ಉತ್ತಮವಾದ ಜಿಯೋ ಸ್ಪೇಸ್ ಫೈಬರ್ (Jio Space Fiber) ಸ್ಪೀಡ್ ಪಡೆಯಬಹುದೆಂದು ಕಂಪನಿ ಹೇಳಿದೆ.

ಜಿಯೋ ಸ್ಪೇಸ್ ಫೈಬರ್ ಎಂದರೇನು? What is Jio space fiber?

ಮೊದಲಿಗೆ ಈ ಜಿಯೋ ಸ್ಪೇಸ್ ಫೈಬರ್ (Jio Space Fiber) ಒಂದು ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸಂಪರ್ಕ ಟೆಕ್ನಾಲಜಿಯಾಗಿದೆ. ಕಂಪನಿ ಹೊಸ ಜಿಯೋ ತಂತ್ರಜ್ಞಾನವನ್ನು ಭಾರತದಲ್ಲಿ ಈಗಾಗಲೇ ಮೇಲೆ ಹೇಳಿದಂತೆ ಮೊದಲ ಬಾರಿಗೆ ಕಂಪನಿ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ (IMC 2023) ರಿಲಯನ್ಸ್ ಜಿಯೋದ ಚೆರ್‌ಮ್ಯಾನ್ ಆಕಾಶ್ ಅಂಬಾನಿ (Akash Ambani) ಪ್ರದರ್ಶಿಸಿದರು. ಅಲ್ಲದೆ ಇದನ್ನು ಭಾರತಕ್ಕೆ ತರಲು ಮೀಡಿಯಂ ಅರ್ಥ್ ಆರ್ಬಿಟ್ (MEO) ಉಪಗ್ರಹ ಇಂಟರ್ನೆಟ್ ಅನ್ನು ನೀಡಲು Luxembourg ಮೂಲದ ಸ್ಯಾಟಲೈಟ್ ಟೆಲಿಕಾಂ ಕಂಪನಿಯಾದ SES (Societe Europeenne des Satellites) ಕಂಪನಿಯೊಂದಿಗೆ Jio ತನ್ನ ಪಾಲುದಾರಿಕೆಯನ್ನು ಘೋಷಿಸಿದೆ.

ಭಾರತದ ಈ ರಾಜ್ಯಗಳಲ್ಲಿ ಜಿಯೋ ಸ್ಪೇಸ್ ಫೈಬರ್ (Jio Space Fiber) ಪರೀಕ್ಷೆ

ಭಾರತದ ಟೆಲಿಕಾಂ ಇಲಾಖೆ (DoT) ಭಾರತದಲ್ಲಿ ಮುಂಬರಲಿರುವ ಈ ರಿಲಯನ್ಸ್ ಜಿಯೋ (Reliance Jio) ಹೊಸ ಮಾದರಿಯ ಇಂಟರ್ನೆಟ್ ಸೇವೆಯನ್ನು ಆರಂಭಿಸಲು ಈಗಾಗಲೇ ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯೂನಿಕೇಷನ್ ಬೈ ಸ್ಯಾಟಲೈಟ್ ಸರ್ವೀಸ್ (GMPCS) ಪರವಾನಗಿಯನ್ನು ನೀಡಿದೆ. ಈ ಜಿಯೋ ಸ್ಪೇಸ್ ಫೈಬರ್ (Jio Space Fiber) ಭಾರತದಲ್ಲಿ ಪ್ರಸ್ತುತ 100Mbps ವೇಗದ ಡೇಟಾ ಅನುಭವವನ್ನು ಒದಗಿಸುವುದಾಗಿ ನಿರೀಕ್ಷಿಸಲಾಗಿದೆ. ಇದರ ಕ್ರಮವಾಗಿ ಗಿರ್ ಗುಜರಾತ್, ಕೊರ್ಬಾ ಛತ್ತೀಸಗಡ, ನಬರಂಗಪುರ ಒಡಿಶಾ, ಜೋರ್ಹತ್ ಅಸ್ಸಾಂ ಪ್ರದೇಶಗಳಲ್ಲಿ ಪರೀಕ್ಷೆ ನಡೆಯುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries