ನವದೆಹಲಿ: ದೇಶದ 58 ಸ್ಥಾನಗಳಿಗೆ ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಇಂದು (ಮೇ 25) ನಡೆಯಲಿದ್ದು 11 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಕಣದಲ್ಲಿ 889 ಅಭ್ಯರ್ಥಿಗಳಿದ್ದಾರೆ.
11.13 ಕೋಟಿ ಮತದಾರರಲ್ಲಿ 5.84 ಕೋಟಿ ಪುರುಷರು, 5.29 ಮಹಿಳೆಯರು, 5,120 ತೃತೀಯ ಲಿಂಗಿಗಳು ಇದ್ದಾರೆ.
ಪ್ರತಿಕೂಲ ಹವಾಮಾನದಿಂದಾಗಿ ಚುನಾವಣೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸಲು ಸಮಸ್ಯೆ ಎದುರಾದ ಕಾರಣ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿಯಲ್ಲಿ 3ನೇ ಹಂತದಲ್ಲಿ ಮುಂದೂಡಿಕೆಯಾಗಿದ್ದ ಚುನಾವಣೆ ನಾಳೆ (ಆರನೇ ಹಂತದಲ್ಲಿ) ನಡೆಯುತ್ತಿದೆ.
ಒಡಿಶಾದ ಕೆಲವು ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳ ಜೊತೆಗೆ ಪಶ್ಚಿಮ ಬಂಗಾಳದ ಕೆಲವು ಲೋಕಸಭಾ ಕ್ಷೇತ್ರಗಳಿಗೂ ಆರನೇ ಹಂತದಲ್ಲಿ ಶನಿವಾರ ಮತದಾನ ನಡೆಯಲಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೀಮಲ್ ಚಂಡಮಾರುತದಿಂದ ವಾತಾವರಣದಲ್ಲಿ ಬದಲಾವಣೆ ಉಂಟಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮತದಾನ ನಡೆಯಲಿರುವ ಪ್ರದೇಶಗಳಲ್ಲಿ ವೈಪರೀತ್ಯದ ಅಪಾಯಗಳಿಲ್ಲ ಎಂದು ತಿಳಿಸಿದೆ.