HEALTH TIPS

ಕೀಟನಾಶಕ: ನ್ಯೂಜಿಲೆಂಡ್‌ನಲ್ಲೂ MDH, ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರಿಶೀಲನೆ

          ಹೈದರಾಬಾದ್‌: ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ನ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನ್ಯೂಜಿಲೆಂಡ್‌ನ ಆಹಾರ ಸುರಕ್ಷತಾ ನಿಯಂತ್ರಕ ಹೇಳಿದೆ.

             ಈ ಬಗ್ಗೆ ಬೇರೆ ದೇಶಗಳಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ನಮಗೆ ಅರಿವಿದೆ ಎಂದು ನ್ಯೂಜಿಲೆಂಡ್‌ನ ಆಹಾರ ಸುರಕ್ಷತಾ ನಿಯಂತ್ರಕ ರಾಯಿಟರ್ಸ್‌ಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

              ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಎರಡು ಕಂಪನಿಗಳ ಮಸಾಲೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಕೀಟನಾಶಕ, ಎಥಿಲೀನ್ ಆಕ್ಸೈಡ್ ಇದೆ ಎಂದು ಹಾಂಕಾಂಗ್ ಕಳೆದ ತಿಂಗಳು ನಿಷೇಧ ಹೇರಿತ್ತು. ಎವರೆಸ್ಟ್ ಸಾಂಬಾರು ಪದಾರ್ಥಗಳ ಮಿಶ್ರಣವನ್ನು ಸಿಂಗಪುರ ವಾಪಸ್‌ ಪಡೆದಿತ್ತು.

               'ಎಥಿಲೀನ್ ಆಕ್ಸೈಡ್ ಮಾನವರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅದನ್ನು ಕ್ರಿಮಿನಾಶಕವಾಗಿ ಬಳಕೆ ಮಾಡುವುದನ್ನು ನ್ಯೂಜಿಲೆಂಡ್ ಹಾಗೂ ಇತರ ದೇಶಗಳಲ್ಲಿ ನಿಷೇಧಿಸಲಾಗಿದೆ. ಎಂಡಿಎಚ್‌ ಹಾಗೂ ಎವರೆಸ್ಟ್ ನ್ಯೂಜಿಲೆಂಡ್‌ನಲ್ಲಿಯೂ ಇರುವುದರಿಂದ ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ' ಎಂದು ನ್ಯೂಜಿಲೆಂಡ್‌ನ ಆಹಾರ ಸುರಕ್ಷತೆ ನಿಯಂತ್ರಕದ ಹಂಗಾಮಿ ಉಪನಿರ್ದೇಶಕ ಜೆನ್ನಿ ಬಿಷಪ್ ಹೇಳಿದ್ದಾರೆ.

           ಈ ಬಗ್ಗೆ ಮಾಹಿತಿ ಬಯಸಿ ಉಭಯ ಕಂಪನಿಗಳನ್ನು ರಾಯಿಟರ್ಸ್ ಸಂಪರ್ಕಿಸಿತಾದರೂ, ಪ್ರತಿಕ್ರಿಯೆ ಲಭ್ಯವಾಗಿಲ್ಲ.

              ಭಾರತದಲ್ಲೂ ಈ ಕಂಪನಿಗಳ ಮಸಾಲೆ ಉತ್ಪನ್ನಗಳ ಮಾದರಿಗಳ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದರೂ, ಈವರೆಗೂ ಅವುಗಳ ಫಲಿತಾಂಶ ಬಹಿರಂಗಗೊಂಡಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries