HEALTH TIPS

Mumbai Hoarding Crash: ಭವೇಶ್ ಭಿಂಡೆ ಪೊಲೀಸ್ ಕಸ್ಟಡಿ ಮೇ 29ರವರೆಗೆ ವಿಸ್ತರಣೆ

            ಮುಂಬೈ: ಮುಂಬೈನ ಛೇಡಾ ನಗರದ ಘಾಟ್ಕೋಪರ್‌ನಲ್ಲಿ ಜಾಹೀರಾತು ಫಲಕ ಕುಸಿದು 17 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್‌ ಭಿಂಡೆ ಅವರ ಪೊಲೀಸ್‌ ಕಸ್ಟಡಿ ಅವಧಿಯನ್ನು ಮುಂಬೈ ನ್ಯಾಯಾಲಯ ಮೇ 29ರವರೆಗೆ ವಿಸ್ತರಿಸಿ ಭಾನುವಾರ ಆದೇಶಿಸಿದೆ.

          ಭಿಂಡೆ ಅವರ ಇಗೊ ಮಿಡಿಯಾ ಪ್ರೈವೆಟ್ ಲಿಮಿಟೆಡ್‌ ಸಂಸ್ಥೆಯ 120 ಅಡಿ ಅಗಲ ಮತ್ತು 120 ಅಡಿ ಎತ್ತರದ ಬೃಹತ್ ಜಾಹೀರಾತು ಫಲಕವು ಭಾರಿ ಧೂಳು ಸಹಿತ ಬಿರುಗಾಳಿ ಮಳೆಯಿಂದಾಗಿ ಮೇ 13ರಂದು ಪೆಟ್ರೋಲ್‌ ಪಂಪ್‌ ಮೇಲೆ ಕುಸಿದು ಬಿದ್ದಿತ್ತು. ಈ ವೇಳೆ ಅದರ ಅಡಿಯಲ್ಲಿ ಸಿಲುಕಿದ್ದ 17 ಜನರು ಸಾವಿಗೀಡಾಗಿದ್ದರು.

           ಘಟನೆ ಬಳಿಕ ಭಿಂಡೆ ಪರಾರಿಯಾಗಿದ್ದರು. ಪೊಲೀಸರು ಅವರ ಮೇಲೆ ಸೆಕ್ಷನ್‌ 304ರ ಅಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಮೇ 16ರಂದು ರಾಜಸ್ಥಾನದಲ್ಲಿ ಉದಯಪುರದಲ್ಲಿ ಭಿಂಡೆ ಅವರನ್ನು ಬಂಧಿಸಿ ಕರೆತರಲಾಗಿತ್ತು.

             ನ್ಯಾಯಾಲಯವು ಮೇ 26ರವರೆಗೆ ಭಿಂಡೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ನಗರದಾದ್ಯಂತ ಸಂಸ್ಥೆಯು ಅಳವಡಿಸಿರುವ ಇತರ ಜಾಹೀರಾತು ಫಲಕಗಳ ಕುರಿತೂ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಪೊಲೀಸ್‌ ಕಸ್ಟಡಿ ಅವಧಿಯನ್ನು ವಿಸ್ತರಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries