HEALTH TIPS

RML ಲಂಚ ಪ್ರಕರಣ | ಸಿಬಿಐನಿಂದ ಮತ್ತಿಬ್ಬರ ಬಂಧನ: 11ಕ್ಕೇರಿದ ಬಂಧಿತರ ಸಂಖ್ಯೆ

            ವದೆಹಲಿ: ದೆಹಲಿಯ ರಾಮ ಮನೋಹರ ಲೋಹಿಯಾ(RML)‌ ಆಸ್ಪತ್ರೆಯಲ್ಲಿ ವ್ಯಾಪಕವಾಗಿದ್ದ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿಬಿಐ ಇಂದು (ಗುರುವಾರ) ಮತ್ತಿಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

           ವೈದ್ಯಕೀಯ ಸಲಕರಣೆ ಪೂರೈಕೆದಾರ ಆಕರ್ಶನ್ ಗುಲಾಟಿ ಮತ್ತು ನರ್ಸ್‌ ಶಾಲು ಶರ್ಮಾ ಬಂಧಿತರು.

                ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಪ್ರಕರಣದಲ್ಲಿ ಇಬ್ಬರು ಹೃದ್ರೋಗ ತಜ್ಞರನ್ನೂ ಒಳಗೊಂಡಂತೆ 9 ಜನರನ್ನು ಸಿಬಿಐ ಬುಧವಾರ ಬಂಧಿಸಿತ್ತು. ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ. ಅಜಯ್ ರಾಜ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಪರ್ವತಗೌಡ ಚನ್ನಪ್ಪಗೌಡ ಬಂಧಿತ ವೈದ್ಯರು.

            ಸ್ಟಂಟ್‌ ಹಾಗೂ ಇನ್ನಿತರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಮಾರಾಟಗಾರರಿಂದ ಲಂಚ ಪಡೆದ ಆರೋಪ ಇವರ ಮೇಲಿದೆ.

               ಪ್ರಕರಣದಲ್ಲಿ ಉಪಕರಣಗಳ ಪೂರೈಕೆದಾರ ನಾಗಪಾಲ್ ಟೆಕ್ನಾಲಜೀಸ್‌ನ ನರೇಶ ನಾಗಪಾಲ್ ಅವರನ್ನೂ ಬಂಧಿಸಲಾಗಿದೆ. ತಮ್ಮ ಉಪಕರಣಗಳ ಖರೀದಿಗೆ ಶಿಫಾರಸು ಮಾಡಲು ನಾಗಪಾಲ್ ಅವರು ಪರ್ವತಗೌಡ ಅವರಿಗೆ ₹2.48 ಲಕ್ಷ ಲಂಚ ನೀಡಿದ್ದರು.

               ಭಾರ್ತಿ ಮೆಡಿಕಲ್ ಟೆಕ್ನಾಲಜೀಸ್‌ನ ಭರತ್ ಸಿಂಗ್ ದಲಾಲ್ ಅವರು ಡಾ. ರಾಜ್ ಅವರಿಗೆ ಯುಪಿಐ ಮೂಲಕ ಎರಡು ಬಾರಿ ಹಣ ಪಾವತಿಸಿದ್ದಾರೆ. ಅಬ್ರಾರ್ ಅಹಮದ್ ಅವರು ಆಸ್ಪತ್ರೆಯ ಕ್ಯಾಥ್‌ ಲ್ಯಾಬ್‌ ಮುಖ್ಯಸ್ಥ ರಜನೀಶ್ ಕುಮಾರ್ ಅವರಿಗೆ ಲಂಚ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries