HEALTH TIPS

ಪೋಶೆ ಅಪಘಾತ: ಕಾರಿನ ನೋಂದಣಿ ರದ್ದು ಪ್ರಕ್ರಿಯೆ ಆರಂಭಿಸಿದ RTO ಅಧಿಕಾರಿಗಳು

          ಪುಣೆ: ಅಪ್ರಾಪ್ತ ಚಲಾಯಿಸಿ ಇಬ್ಬರ ಸಾವಿಗೆ ಕಾರಣವಾದ ಪೋಶೆ ಕಾರಿನ ತಾತ್ಕಾಲಿಕ ನೋಂದಣಿಯನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

         'ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣದಲ್ಲಿ ವಾಹನದ ನೋಂದಣಿಯನ್ನು 12 ತಿಂಗಳವರೆಗೆ ರದ್ದು ಮಾಡುವ ಅವಕಾಶ ಮೋಟಾರು ವಾಹನ ಕಾಯ್ದೆಯಡಿ ಇದೆ.

           ನಾವು ಈಗ ಕಾರಿನ ತಾತ್ಕಾಲಿಕ ನೋಂದಣಿಯನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಈ ಸಂಬಂಧ ಕಾರಿನ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ' ಎಂದು ಆರ್‌ಟಿಒ ಅಧಿಕಾರಿ ಸಂಜೀವ್ ಭೋರ್ ತಿಳಿಸಿದ್ದಾರೆ.

           ಬೆಂಗಳೂರಿನಿಂದ ಪುಣೆಗೆ ತರಲು ಕಾರಿಗೆ ತಾತ್ಕಾಲಿಕ ನೋಂದಣಿ ನೀಡಲಾಗಿತ್ತು. ಸರಿಯಾದ ನೋಂದಣಿ ಸಂಖ್ಯೆ ಇಲ್ಲದೆ ಕಾರನ್ನು ಚಲಾಯಿಸುವುದು ಕೂಡ ಅಪರಾಧ ಎಂದು ಅವರು ಹೇಳಿದ್ದಾರೆ.

ಐಷಾರಾಮಿ ಸ್ಪೋರ್ಟ್ ಸೆಡನ್ 'ಪೋಶೆ ಟೇಕನ್' ಅನ್ನು ಬೆಂಗಳೂರು ಮೂಲದ ಡೀಲರ್‌ ಒಬ್ಬರು ವಿದೇಶದಿಂದ ಆಮದು ಮಾಡಿಕೊಂಡು, ತಾತ್ಕಾಲಿಕ ನೋಂದಣಿಯೊಂದಿಗೆ ಮಹಾರಾಷ್ಟ್ರಕ್ಕೆ ಕಳುಹಿಸಿದ್ದರು.

              ಘಟನೆಯ ಬಳಿಕ ಪುಣೆಯ ಆರ್‌.ಟಿ.ಒ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ನೋಂದಣಿ ಶುಲ್ಕ ಭಾಗಶಃ ಪಾವತಿಗೆ ಬಾಕಿ ಇತ್ತು. ದಾಖಲೆಗಳ ಕೆಲಸ ಪೂರ್ಣಗೊಳಿಸಲು ಶುಲ್ಕ ‍ಪಾವತಿಸಲು ಮಾಲೀಕರಿಗೆ ಸೂಚಿಸಲಾಗಿತ್ತು. ಆದರೆ ಶುಲ್ಕ ಪಾವತಿಸದ ಕಾರಣ ಶಾಶ್ವತ ನೋಂದಣಿ ಆಗಿರಲಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries