ಎರಡನೇ ಹಂತದಲ್ಲಿ ಈ ಔಷಧ ಪ್ರಯೋಗ ಯಶಸ್ವಿಯಾಗಿದ್ದು, ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಗುದನಾಳದ ಕ್ಯಾನ್ಸರ್ ಅನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಎರಡನೇ ಹಂತದ ಔಷಧ ಪ್ರಯೋಗದ ಬಳಿಕ ಮೊದಲ 24 ರೋಗಿಗಳಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಸುಮಾರು ಎರಡು ವರ್ಷದ ಬಳಿಕ ಅವರಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಿಲ್ಲ.
ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಆಂಕೊಲಾಜಿಸ್ಟ್ ಡಾ. ಆಂಡ್ರಿಯಾ ಸೆರ್ಸೆಕ್ ಅವರ ಪ್ರಕಾರ Dostarlimab-gxly ಕ್ಯಾನ್ಸರ್ ಔಷಧವು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಲ್ಲಿ ಉತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಮತ್ತು ವಿಕಿರಣದ ಅಗತ್ಯ ಮೊದಲ ಹಂತದಲ್ಲಿ ನೀಡಲಾಗುತ್ತದೆ. ಇದು ಚಿಕಿತ್ಸಾ ಆಯ್ಕೆಯ ಭರವಸೆಯನ್ನು ನೀಡುತ್ತದೆ, ಇವೆರಡೂ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಅಡ್ಡ ಪರಿಣಾಮ ಕಡಿಮೆ
ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಸಾಮಾನ್ಯವಾಗಿ ಕರುಳು, ಮೂತ್ರ, ಲೈಂಗಿಕ ಕ್ರಿಯೆಯಲ್ಲಿ ತೊಂದರೆ, ಎರಡನೇ ಬಾರಿ ಮತ್ತೆ ಕ್ಯಾನ್ಸರ್ ಬರುವ ಅಪಾಯ ಮತ್ತು ಬಂಜೆತನವನ್ನು ಉಂಟು ಮಾಡುತ್ತದೆ. ಇದು ಜೀವನದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಲು ಇಮ್ಯುನೊಥೆರಪಿಯನ್ನು ಬಳಸಿಕೊಂಡು ಈ ಔಷಧವು ಕಾರ್ಯನಿರ್ವಹಿಸುತ್ತದೆ. ಇದು ಸಾಂಪ್ರದಾಯಿಕ ಕಿಮೊಥೆರಪಿಗಿಂತ ಭಿನ್ನವಾಗಿದೆ. ಈ ಔಷಧವು ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ತೋರಿಸಿದೆ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದೊಂದು ಕ್ರಾಂತಿಯನ್ನು ಉಂಟು ಮಾಡಿದೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್‌ಎಲ್ ವೈ ಔಷಧದ ಪರಿಣಾಮಗಳ ಕುರಿತು ತಿಳಿದುಕೊಳ್ಳಲು ವಿವಿಧ ಕೊಲೊರೆಕ್ಟಲ್ ಕ್ಯಾನ್ಸರ್ ಮೇಲೆ ಪ್ರಯೋಗಗಳನ್ನು ಮುಂದುವರಿಸಲಾಗುತ್ತದೆ.
ಎರಡನೇ ಹಂತದ ಯಶಸ್ವಿ ಪ್ರಯೋಗದ ಬಳಿಕ ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್‌ಎಲ್ ವೈ ಅನ್ನು ಚಿಕಾಗೋದ 2024 ರ ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.
ಕಳೆದ ವರ್ಷ ಎಂಡೊಮೆಟ್ರಿಯಲ್ ಕ್ಯಾನ್ಸರ್ ಗೆ ಕಿಮೊಥೆರಪಿ ಜೊತೆಗೆ ಪೂರಕ ಚಿಕಿತ್ಸೆಯಾಗಿ ಔಷಧೀಯ ಕಂಪೆನಿಯಾದ ಎಫ್ ಡಿಎಯಿಂದ ಔಷಧವನ್ನು ಅನುಮೋದಿಸಲಾಗಿದೆ. ಇದೀಗ ಔಷಧೀಯ ಕಂಪೆನಿ ಜಿಎಸ್ ಕೆ ಇತರ ರೀತಿಯ ಕೊಲೊರೆಕ್ಟಲ್ ಕ್ಯಾನ್ಸರ್‌ಗಳ ಅಧ್ಯಯನವನ್ನು ನಡೆಸುತ್ತಿದೆ.
ಔಷಧ ಪ್ರಯೋಗದ ಕುರಿತು ಪ್ರತಿಕ್ರಿಯಿಸಿರುವ ಜಿಎಸ್‌ಕೆ ಹಿರಿಯ ಉಪಾಧ್ಯಕ್ಷ ಅಬ್ದುಲ್ಲಾ ಹೆಶಮ್, 42 ರೋಗಿಗಳಲ್ಲಿ ಔಷಧ ಬೀರಿರುವ ಪರಿಣಾಮ ಅತ್ಯದ್ಭುತವಾಗಿದೆ. ಈ ಫಲಿತಾಂಶಗಳು ನಮ್ಮನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೆಜ್ಜೆ ಹತ್ತಿರಕ್ಕೆ ತಂದಿದೆ ಎಂದು ತಿಳಿಸಿದ್ದಾರೆ.
ಈ ಚಿಕಿತ್ಸೆಯ ಉದ್ದೇಶ ಮತ್ತು ವಿಧಾನಗಳ ಬಗ್ಗೆ ರೋಗಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಪ್ರಯೋಗಗಳನ್ನು ಮುಂದುವರಿಸಲಾಗಿದೆ. ಕೆಲವು ಕೊಲೊರೆಕ್ಟಲ್ ಕ್ಯಾನ್ಸರ್‌ಗಳಲ್ಲಿ dostarlimabgxly ಮೌಲ್ಯಮಾಪನ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಔಷಧದಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎಂದು ಜಿಎಸ್ ಕೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.