ಕಾಸರಗೋಡು: ಲೋಕಸಭಾ ಕ್ಷೇತ್ರದ ಐಕ್ಯರಂಗ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ 490659 ಮತಗಳನ್ನು ಪಡೆದುಕೊಂಡಿದ್ದು, ಸಮೀಪ ಸ್ಪರ್ಧಿ ಎಡರಂಗದ ಎಂ.ವಿ ಬಾಲಕೃಷ್ಣನ್ ಅವರನ್ನು 100649 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಎಂ.ವಿ ಬಾಲಕೃಷ್ಣನ್(ಸಿಪಿಎಂ)ಅವರು 390010 ಮತ ಪಡೆದುಕೊಂಡಿದ್ದಾರೆ. ಬಿಜೆಪಿಯ ಎಂ.ಎಲ್ ಅಶ್ವಿನಿ ಅವರು 219558ಮತಗಳನ್ನು ಪಡೆದುಕೊಂಡಿದ್ದಾರೆ.
ಬಹುಜನ ಸಮಾಜ ಪಕ್ಷದ ಸುಕುಮಾರಿ ಅವರು 1612, ಸ್ವತಂತ್ರ ಅಬ್ಯರ್ಥಿಗಳಾದ ಅನೀಶ್ ಪಯ್ಯನ್ನೂರ್-759, ರಾಜೇಶ್ವರಿ-897, ಮನೋಹರನ್ ಕೆ-804, ಬಾಲಕೃಷ್ಣನ್ ಎನ್- 628, ಎನ್ ಕೇಶವ ನಾಯಕ್-507ಮತಗಳನ್ನು ಪಡೆದುಕೊಂಡಿದ್ದಾರೆ. 'ನೋಟಾ'ಕ್ಕೆ 7112ಮತಗಳು ದಾಖಲಾಗಿದ್ದು, ಕಳೆದ ಬಾರಿಗಿಂತ ಮೂರು ಸಾವಿರ ಮತಗಳು ಹೆಚ್ಚಾಗಿದೆ.