HEALTH TIPS

ಸಮಸ್ಯೆಗಳೇ ಇಲ್ಲದೆ 100 ವರ್ಷ ಬದುಕಲು ಯೋಗ ಸಹಕಾರಿ: ಮಧ್ಯಪ್ರದೇಶ ಸಿಎಂ ಯಾದವ್

 ಭೋಪಾಲ್: ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ಯಾವುದೇ ಸಮಸ್ಯೆಗಳು ಇಲ್ಲದೆ ನೂರು ವರ್ಷ ಬದುಕಬಹುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಧ್ಯಪ್ರದೇಶವೂ ಸೇರಿದಂತೆ ವಿಶ್ವದಾದ್ಯಂತ ಜನರು ಯೋಗ ಅಭ್ಯಾಸ ನಡೆಸಿದ್ದಾರೆ.

'ಯೋಗ ತನಗಾಗಿ ಮತ್ತು ಸಮಾಜಕ್ಕಾಗಿ' ಎಂಬುದು ಈ ಬಾರಿಯ ಥೀಮ್‌ (ವಸ್ತು ವಿಷಯ) ಆಗಿದೆ.

ಮಧ್ಯಪ್ರದೇಶದಲ್ಲಿ ಸರ್ಕಾರದ ವತಿಯಿಂದ ಲಾಲ್‌ ಪರೇಡ್‌ ಮೈದಾನದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ, ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿರುವ ಸಭಾಂಗಣದಲ್ಲಿ ಯೋಗ ದಿನ ಆಚರಿಸಲಾಯಿತು. ಯಾದವ್‌, ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು ಸೇರಿದಂತೆ ಸಾಕಷ್ಟು ಜನರು ಭಾಗವಹಿಸಿದರು.


ಈ ವೇಳೆ ಮಾತನಾಡಿದ ಯಾದವ್, 'ಹತ್ತು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ವಿಶ್ವಸಂಸ್ಥೆ ಹಾಗೂ ಅದರ ಬಹುತೇಕ ಸದಸ್ಯ ರಾಷ್ಟ್ರಗಳು ಈ ದಿನವನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲು ಹಾಗೂ ಪ್ರಾಚೀನ ಭಾರತದ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದವು. 'ಯೋಗದಿಂದ ನಿರೋಗ' ಎಂಬ ಭಾರತದ ಪ್ರಸ್ತಾವನೆಗೆ ಹಾಗೂ ಭಾರತದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಲು ಅನುಮೋದನೆ ಸಿಕ್ಕಿತು' ಎಂದು ಹೇಳಿದ್ದಾರೆ.

ಪ್ರಾಚೀನ ಭಾರತದ ಅಭ್ಯಾಸವನ್ನು ಪ್ರೋತ್ಸಾಹಿಸುವುದಕ್ಕಾಗಿ, ರಾಜ್ಯ ಸರ್ಕಾರವು ಯೋಗವನ್ನು ಪಠ್ಯದಲ್ಲಿ ಅಳವಡಿಸಿದೆ. ಇಂದು ಯೋಗ ಶಿಕ್ಷಕರನ್ನೂ ಉನ್ನತ ಶಿಕ್ಷಣ ಇಲಾಖೆಯ ಸಾಮಾನ್ಯ ಶಿಕ್ಷಕರಂತೆಯೇ ನೋಡಲಾಗುತ್ತಿದೆ ಎಂದಿದ್ದಾರೆ. ಹಾಗೆಯೇ, 'ಇದು ಯೋಗದ ಬಗೆಗಿನ ನಮ್ಮ ಬದ್ಧತೆಯನ್ನು ತೋರುತ್ತದೆ' ಎಂದು ಹೇಳಿಕೊಂಡಿದ್ದಾರೆ.

ಯೋಗ ಅಭ್ಯಾಸ ಮಾಡುವವರಿಗೆ ಹೋಲಿಸಿದರೆ, ಯೋಗದಿಂದ ದೂರ ಉಳಿದಿರುವವರು ಕೋವಿಡ್ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಿದ್ದಾರೆ.

ಯೋಗ ಅಭ್ಯಾಸವು ಜನರು ಅನಾರೋಗ್ಯಕ್ಕೀಡಾಗುವುದನ್ನು ತಪ್ಪಿಸುತ್ತದೆ. ಯಾವುದೇ ಸಮಸ್ಯೆಗಳಿಲ್ಲದೆ 100 ವರ್ಷ ಬದುಕಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಮರದಿಂದ ತಾನಾಗಿಯೇ ಬೀಳುವ ಹಣ್ಣಿನಂತೆ ಮಾಗಿದ (100 ವರ್ಷದ) ನಂತರವೇ ಜನರು ದೇಹತ್ಯಾಗ ಮಾಡಬೇಕು. ಪರಮಾತ್ಮ ನಮ್ಮನ್ನು ಸೃಷ್ಟಿಸಿದ ರೀತಿಯಲ್ಲೇ ದೇವರ ಬಳಿಗೆ ವಾಪಸ್‌ ಆಗಬೇಕು' ಎಂದೂ ಪ್ರತಿಪಾದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries