ಪಾಲಕ್ಕಾಡ್: ವಿವಾಹ ಸಮಾರಂಭದ ಔತಣಕೂಟದಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚು ಮಂದಿಗೆ ಫುಡ್ ಪಾಯ್ಸನಿಂಗ್ ಆದ ಘಟನೆ ನಡೆದಿದೆ. ಅನೇಕ ಜನರು ಅಸ್ವಸ್ಥಗೊಂಡ ನಂತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು.
ಶೋರ್ನೂರು ಕುಲಪಲ್ಲಿ ಸಭಾಂಗಣದಲ್ಲಿ ನಡೆದ ಮದುವೆ ಔತಣಕೂಟದಲ್ಲಿ ಈ ಘಟನೆ ನಡೆದಿದೆ. ಕಳೆದ ಭಾನುವಾರ ಇಲ್ಲಿ ಮದುವೆ ನಡೆದಿತ್ತು. ಫುಡ್ ಪಾಯ್ಸನ್ ನಿಂದ ವಧು-ವರರು ಸೇರಿದಂತೆ ಜನರು ಪರದಾಡಿದರು.
ವಾಂತಿ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಲವರು ಚಿಕಿತ್ಸೆಗೆ ಬಂದಿದ್ದರು. ಬಳಿಕ ಆಹಾರ ವಿಷವಾದ ಕಾರಣ ಎಂದು ತಿಳಿದುಬಂದಿದೆ. ಮದುವೆ ಸಮಾರಂಭದಲ್ಲಿ ಶೊರ್ನೂರಿನಲ್ಲಿರುವ ಕೇಟರಿಂಗ್ ಕಂಪನಿ ಊಟದ ವ್ಯವಸ್ಥೆ ಮಾಡಿತ್ತು. ಅಡುಗೆ ಕೇಂದ್ರದಲ್ಲಿ ಆಹಾರ ಸುರಕ್ಷತಾ ವಿಭಾಗದವರು ನಡೆಸಿದ ತಪಾಸಣೆಯಲ್ಲಿ ಅನೈರ್ಮಲ್ಯದಲ್ಲಿ ಆಹಾರ ತಯಾರಿಸಿರುವುದು ಕಂಡುಬಂದಿದೆ.