ನವದೆಹಲಿ: ಚಂಡೀಗಢದ ಉದ್ಯಮಿಯ ಸುಲಿಗೆ ಪ್ರಕರಣದಲ್ಲಿ ಬೇಕಾಗಿರುವ ಕೆನಡಾ ಮೂಲದ ಉಗ್ರ ಗೋಲ್ಡಿ ಬ್ರಾರ್ ಮತ್ತು ಆತನ ಸಹಚರನ ಬಗ್ಗೆ ಸುಳಿವು ನೀಡಿದವರಿಗೆ ತಲಾ ₹10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಘೋಷಿಸಿದೆ.
ನವದೆಹಲಿ: ಚಂಡೀಗಢದ ಉದ್ಯಮಿಯ ಸುಲಿಗೆ ಪ್ರಕರಣದಲ್ಲಿ ಬೇಕಾಗಿರುವ ಕೆನಡಾ ಮೂಲದ ಉಗ್ರ ಗೋಲ್ಡಿ ಬ್ರಾರ್ ಮತ್ತು ಆತನ ಸಹಚರನ ಬಗ್ಗೆ ಸುಳಿವು ನೀಡಿದವರಿಗೆ ತಲಾ ₹10 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಘೋಷಿಸಿದೆ.
ಈ ವರ್ಷದ ಮಾರ್ಚ್ 8ರಂದು ಉದ್ಯಮಿಯೊಬ್ಬರ ಸುಲಿಗೆಗೆ ಯತ್ನಿಸಿದ್ದ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ), ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸತ್ವಿಂದರ್ ಸಿಂಗ್ ಅಲಿಯಾಸ್ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಮತ್ತು ಪಂಜಾಬ್‌ನ ರಾಜಪುರದ ಬಾಬಾ ದೀಪ್ ಸಿಂಗ್ ಕಾಲೋನಿಯ ಸುಖಜಿಂದರ್ ಸಿಂಗ್ ಅವರ ಪುತ್ರ ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಅಲಿಯಾಸ್ ಗೋಲ್ಡಿ ರಾಜ್‌ಪುರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಇಬ್ಬರ ಕುರಿತಂತೆ ಮಾಹಿತಿ ನೀಡುವ ಮೂಲಕ ಅವರ ಬಂಧನಕ್ಕೆ ನೆರವು ನೀಡುವವರಿಗೆ ತಲಾ ₹10 ಲಕ್ಷ ನಗದು ಬಹುಮಾನ ನೀಡಲಾಗುವುದು ಮತ್ತು ಅವರ ಗುರುತನ್ನು ಗೋಪ್ಯವಾಗಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ಕುರಿತ ಮಾಹಿತಿಯನ್ನು ಎನ್‌ಐಎ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 011-24368800, ವಾಟ್ಸ್‌ಆಯಪ್/ ಟೆಇಲಿಗ್ರಾಮ್ ಸಂಖ್ಯೆ: +91-8585931100 ಅಥವಾ ಇಮೇಲ್ ಐಡಿ do.nia@gov.in ಮೂಲಕ ಹಂಚಿಕೊಳ್ಳಬಹುದಾಗಿದೆ.