HEALTH TIPS

ಗಾಜಾದಲ್ಲಿ ದಾಳಿ ತೀವ್ರಗೊಳಿಸಿದ ಇಸ್ರೇಲ್‌ ಸೇನೆ: ವಾಯುದಾಳಿಗೆ 12 ಬಲಿ

           ಜೆರುಸಲೇಂ: ಗಾಜಾದ ಕೇಂದ್ರದಲ್ಲಿ ಇಸ್ರೇಲ್‌ ನಡೆಸಿದ ಎರಡು ವಾಯುದಾಳಿಯಲ್ಲಿ ಶುಕ್ರವಾರ ಇಬ್ಬರು ಮಕ್ಕಳು, ನಾಲ್ವರು ಮಹಿಳೆಯರು ಸೇರಿ 12 ಮಂದಿ ಮೃತಪಟ್ಟಿದ್ದಾರೆ.

         ರಫಾ ನಗರಕ್ಕೆ ಗಡಿಯಾದ ಇಲ್ಲಿ ಬಹುತೇಕ ಪ್ಯಾಲೆಸ್ಟೀನಿಯರು ನೆಲೆಸಿದ್ದಾರೆ. ಈಜಿಪ್ಟ್‌ಗೆ ಹೊಂದಿಕೊಂಡಂತೆ ಈ ಗಡಿಯುದ್ದಕ್ಕೂ ಇಸ್ರೇಲ್‌ ಸೇನೆಯು ಸುತ್ತುವರಿದಿದೆ.

            ಇಸ್ರೇಲ್‌ನ ಸೇನೆ ತನ್ನ ದಾಳಿಯನ್ನು ತೀವ್ರಗೊಳಿಸುತ್ತಿದ್ದಂತೆ ಇಲ್ಲಿ ಆಶ್ರಯ ಪಡೆದಿದ್ದ 10 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಸುರಕ್ಷತೆ ಅರಸಿ ಗುಳೆಹೋಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಈ ಹಿಂದೆ ಬೇರೆಡೆಯಿಂದ ಇಲ್ಲಿಗೆ ವಲಸೆ ಬಂದಿದ್ದವರೇ ಆಗಿದ್ದಾರೆ.

             ಯುದ್ಧಪೀಡಿತ ಪ್ರದೇಶದಲ್ಲಿ ಹೆಚ್ಚಿನವರು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಪರಿಹಾರ ಕಾರ್ಯಗಳಲ್ಲಿ ನಿರತರಾಗಿರುವ ವಿಶ್ವಸಂಸ್ಥೆಯ ಪ್ರಕಾರ, ಈ ಪ್ರದೇಶದಲ್ಲಿ ಅಗತ್ಯ ವಸ್ತುಗಳಾದ ಆಹಾರ, ನೀರು, ಇತರೆ ಮೂಲಸೌಲಭ್ಯಗಳ ಕೊರತೆಯಾಗಿದೆ.

                ಯಮೆನ್‌ನಲ್ಲಿ ಹೂಥಿ ಬಂಡುಕೋರರನ್ನು ಗುರಿಯಾಗಿಸಿ ಬ್ರಿಟನ್, ಅಮೆರಿಕ ನಡೆಸಿದ ವಾಯುದಾಳಿಯಲ್ಲಿ 16 ಮಂದಿ ಸತ್ತಿದ್ದು, 35 ಮಂದಿ ಗಾಯಗೊಂಡರು ಎಂದು ವರದಿಯು ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries