ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇತ್ತೀಚೆಗೆ ಜರಗಿದ್ದು, ದೃಢಕಲಶವು ಜೂನ್ 12ರಂದು ಬುಧವಾರ ಜರಗಲಿರುವುದು. ಜೂನ್ 11 ಮಂಗಳವಾರ ಸಂಜೆ 6.00ಕ್ಕೆ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ನಡೆಯಲಿರುವುದು.
ಬುಧವಾರ ಬೆಳಗ್ಗೆ 6.ರಿಂದ ಗಣಪತಿಹೋಮ, ದೃಢಕಲಶ ಪೂಜೆ, ದೃಢಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ ನಡೆಯಲಿದೆ. ಇದೇ ಸಂದಭರ್Àದಲ್ಲಿ ರಾಜ್ಯಮಟ್ಟದಲ್ಲಿ ವಿಶೇಷ ಸಾಧನೆಗೈದ ಕುಮಾರಿ ಅನ್ವಿತಾ ತಲ್ಪಣಾಜೆ ಇವರಿಂದ ಬೆಳಗ್ಗೆ 10.30ರಿಂದ ಭಕ್ತಿಗೀತೆ ಕಾರ್ಯಕ್ರಮ ಜರಗಲಿರುವುದು. ಭಗವದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.