ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಲು ನಿರ್ಧರಿಸಿದೆ.
ಈ ಬಗ್ಗೆ ಕೃಷಿ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದ್ದು, ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ನೀಡಲು ಕೇಂದ್ರ ಸರ್ಕಾರ 2024-25ರ ಮಾರ್ಕೆಟಿಂಗ್ ಸೀಸನ್ ನಲ್ಲಿ ಖಾರಿಫ್ ಬೆಳೆಗಳ MSPನ್ನು ಹೆಚ್ಚಿಸಿದೆ” ಎಂದು ಹೇಳಿದೆ.
ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳಿಗೆ ಅತ್ಯಧಿಕ ಎಂಎಸ್‌ಪಿ ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಎಳ್ಳು (ಕ್ವಿಂಟಾಲ್ ಗೆ 632 ರೂಪಾಯಿ ಹೆಚ್ಚಳ) ನೈಜರ್‌ಬೀಡ್ (ಕ್ವಿಂಟಲ್‌ಗೆ 983 ರೂ. ಹೆಚ್ಚಳ) ಅರ್ಹರ್ ದಾಲ್ (ಕ್ವಿಂಟಲ್‌ಗೆ 550 ರೂ) ಹೆಚ್ಚಳ ಮಾಡಲಾಗಿದೆ.
ಭತ್ತದ ಮೇಲಿನ ಎಂಎಸ್‌ಪಿಯನ್ನು 1,533 ರೂ.ನಿಂದ 2,300 ರೂ.ಗೆ ಹೆಚ್ಚಿಸಲಾಗಿದ್ದು, ಜೋಳದ ಎಂಎಸ್‌ಪಿ 2,247 ರೂ.ನಿಂದ 3,371 ರೂ.ಗೆ ಏರಿಕೆಯಾಗಿದೆ ಎಂದು ಸಚಿವ ಸಂಪುಟದ ನಿರ್ಧಾರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದ್ದಾರೆ.