ಕಾಸರಗೋಡು: ಕರ್ತವ್ಯನಿರತ ಎಸ್.ಐ ಹಾಗೂ ಪೊಲೀಸ್ ವಾಹನ ಚಾಲಕ ಕಾನ್‍ಸ್ಟೇಬಲ್‍ಗೆ ಇರಿದು ಗಾಯಗೊಳಿಸಿದ ಪ್ರಕರಣದ ಅಪರಾಧಿ ಬಾರಾ ಗ್ರಾಮದ ಮೀತ್ತಲ್ ಮಾಙËಡ್ ನಿವಾಸಿ ಕೆ.ಎಂ ರಾಶಿದ್ ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ)ದ ನ್ಯಾಯಾಧೀಶೆ ಪ್ರಿಯಾ ಕೆ. ವಿವಿಧ ಕಾಲಂ ಅನ್ವಯ 16ವರ್ಷ ಜ್ಯಲು ಶಿಕ್ಷೆ ಹಾಗೂ 90ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿ ಮೂರು ತಿಂಗಳ ಹೆಚ್ಚುವರಿ ಜೂಲು ಶಿಕ್ಷೆ ಅನುಭವಿಸಬೇಕಾಗಿದೆ.
2019 ಜ. 1ರಂದು ಬೆಳಗ್ಗೆ 3ಕ್ಕೆ ಕಳನಾಡಿನಲ್ಲಿ ಪೊಲೀಸ್ ವಾಹನ ತಡೆದುನಿಲ್ಲಿಸಿ, ಅದರೊಳಗಿದ್ದ ಬೇಕಲ ಠಾಣೆ ಅಂದಿನ ಎಸ್.ಐ ಜಯರಾಜನ್ ಹಾಗೂ ಚಾಲಕ ಇಲ್‍ಸಾದ್ ಎಂಬವರನ್ನು ಮಾರಕಯುಧಗಳೊಂದಿಗೆ ಕೊಲೆಗೆ ಯತ್ನಿಸಿ, ವಾಹನಕ್ಕೆ ಹಾನಿಯೆಸಗಿರುವ ಬಗ್ಗೆ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಬೇಕಲ ಠಾಣೆ ಅಂದಿನ ಇನ್ಸ್‍ಪೆಕ್ಟರ್ ವಿ.ಕೆ ವಿಶ್ವಂಭರನ್ ಪ್ರಕರಣದ ತನಿಖೆ ನಡೆಸಿ ನ್ಯಾಯಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.