ಪೆರ್ಲ: ಧ.ಗ್ರಾ. ಯೋಜನೆ ಮಂಜೇಶ್ವರ ತಾಲೂಕು ಸಮಿತಿ ನೇತೃತ್ವದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನ ಕೇಂದ್ರ ಉಜಿರೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇದರ ಮಾರ್ಗದರ್ಶನದೊಂದಿಗೆ ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟ ಪೆರ್ಲ ವಲಯ, ನವಜೀವನ ಸಮಿತಿ, ಸ್ಥಳೀಯರ ಸಹಕಾರದೊಂದಿಗೆ ಇಡಿಯಡ್ಕದ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಜರಗುತ್ತಿರುವ 1801 ನೇ ಮದ್ಯವರ್ಜನ ಶಿಬಿರದಲ್ಲಿ ದ್ವಿತೀಯ ದಿನ ಆರೋಗ್ಯ ತಪಾಸಣೆ-ಮಾಹಿತಿ-ಭಜನಾ ಸಂಕೀರ್ತನೆ ಜರಗಿತು.
ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೇಶವ ನಾಯ್ಕ್ ಖಂಡಿಗೆ, ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯಶಾಲೆಯ ಡಾ.ಸ್ವಪ್ನಾ ಜೆ, ಶಿಬಿರದ ಆರೋಗ್ಯ ಸಹಾಯಕಿ ನೇತ್ರಾವತಿ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆಗೈದರು. ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮನಃ ಪರಿವರ್ತನಾ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ಜಯಶ್ರೀ, ಜನಜಾಗೃತಿ ವಲಯ ಅಧ್ಯಕ್ಷ ಬಿ.ಪಿ.ಶೇಣಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕುದ್ವ, ಉದಯ ಚೆಟ್ಟಿಯಾರ್, ವಲಯ ಒಕ್ಕೂಟದ ಅಧ್ಯಕ್ಷ ಶ್ರೀಧರ ಮಣಿಯಾಣಿ, ಬೇಂಗಪದವು ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್, ಧರ್ಮತ್ತಡ್ಕ ಒಕ್ಕೂಟದ ಅಧ್ಯಕ್ಷ ಆಶೋಕ್ ಪೆರ್ಮುದೆ, ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು ವ್ಯವಸ್ಥೆಗೆ ಸಹಕಾರ ನೀಡಿದರು.
ಯೋಗ ಶಿಕ್ಷಕ ವಿಜಯ ಭಟ್ ಯೋಗಾಭ್ಯಾಸ ನಡೆಸಿದರು. ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ಪೆರ್ಮುದೆ ಭಜನಾ ಸೇವೆ, ಧರ್ಮತ್ತಡ್ಕ ಒಕ್ಕೂಟದ ಜ್ಞಾನ ವಿಕಾಸದ ನೇತೃತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.