ಪೆರ್ಲ: "ಜೀವನದಲ್ಲಿ ಕಿಕ್ ಬೇಕು ಎಂದು ಮದ್ಯಪಾನ ಸಹಿತ ಯಾವುದೋ ದುಶ್ಚಟಕ್ಕೆ ಬಲಿಯಾಗುವುದಕ್ಕಿಂತ ನಮ್ಮ ಪ್ರತಿಭೆಯನ್ನು ಬೆಳೆಸುವ ಮೂಲಕ ಸಜ್ಜನಿಕೆಯನ್ನು ಮೈಗೂಡಿಸಿ ನಿμÁ್ಠವಂತರಾದರೆ ಮುಂದೊಂದು ದಿನ ಬದುಕಿನಲ್ಲಿ ಕ್ಲಿಕ್ ಆಗಲು ಸಾಧ್ಯ.ಅದುವೇ ಮಾನವ ಜನ್ಮದ ಸಾರ್ಥಕತೆ ಎಂದು ಜನ ಜಾಗೃತಿ ಸದಸ್ಯ ಸುಮಿತ್ ರಾಜ್ ಅಭಿಪ್ರಾಯಪಟ್ಟರು.
ಅವರು ಧ.ಗ್ರಾ.ಯೋಜನೆ ಮಂಜೇಶ್ವರ ತಾಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಡಿಯಡ್ಕದ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಜರಗುತ್ತಿರುವ 1801ನೇ ಮದ್ಯವರ್ಜನ ಶಿಬಿರ ದಲ್ಲಿ ತೃತೀಯ ದಿನ ಗಣ್ಯರಿಂದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಿಬಿರಕ್ಕೆ ಸೇರಿ ದುಶ್ಚಟಗಳನ್ನು ವರ್ಜಿಸುವವರಿಗೆ ಗ್ರಾಮಾಭಿವೃದ್ಧಿ ಮತ್ತು ಜನ ಜಾಗೃತಿ ಇದೊಂದು ಸದಾವಕಾಶ ಒದಗಿಸಿದೆ ಇದನ್ನು ಸದುಪಯೋಗಪಡಿಸಿಕೊಂಡರೆಮಾತ್ರ ಶಿಬಿರದ ಉದ್ದೇಶ ಸಾರ್ಥಕವಾಗಬಹುದು ಎಂದರು.
ಜಿ.ಪಂ.ಸದಸ್ಯೆ ಶೈಲಜಾ ಭಟ್, ನಾರಾಯಣ ನಾಯ್ಕ್ ಅಡ್ಕಸ್ಥಳ, ಅಡ್ಯನಡ್ಕ ಅಮೃತಧಾರ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀರಾಮ್, ಜನಜಾಗೃತಿ ವೇದಿಕೆಯ ಟಿ.ಪ್ರಸಾದ್, ಉದ್ಯಮಿ ಹರಿಪ್ರಸಾದ್ ಪುತ್ರಕಳ,ಪ್ರಗತಿಬಂಧು ಸ್ವಸಹಾಯ ಸಂಘಗಳ ವಲಯಾಧ್ಯಕ್ಷ ಸೋಮಶೇಖರ ಸುವರ್ಣ,ಸಾಮಾಜಿಕ ಮುಂದಾಳು ಕೋಳಾರು ಸತೀಶ್ಚಂದ್ರ ಭಂಡಾರಿ, ಶ್ಯಾಮ್ ಪ್ರಸಾದ್ ಕಡಾರು,ಅಖಿಲೇμï ನಗುಮುಗಂ,ವಲಯ ಯೋಜನಾಧಿಕಾರಿ ಶಶಿಕಲಾ ಸುವರ್ಣ, ವಲಯ ಮೇಲ್ವಿಚಾರಕಿ ಜಯಶ್ರೀ, ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ, ತಾಲೂಕು ಜನಜಾಗೃತಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮೊದಲಾದವರು ಸಬೆಯಲ್ಲಿ ಉಪಸ್ಥಿತರಿದ್ದರು. ಜನ ಜಾಗೃತಿ ವಲಯ ಅಧ್ಯಕ್ಷ ಬಿ.ಪಿ.ಶೇಣಿ ಸ್ವಾಗತಿಸಿ ಮಲ್ಲಿಕಾ ವಂದಿಸಿದರು ಮೇಲ್ವಿಚಾರಕ ಕೃಷ್ಣಪ್ಪ ನಿರೂಪಿಸಿದರು.
ಶಿಬಿರದಲ್ಲಿ ಶಂಕರ ರೈ ಮಂಟಪ್ಪಾಡಿ, ಉಮೇಶ್.ಕೆ ಪೆರ್ಲ ಗುಂಪು ಸಲಹೆ, ಆಯಿಷಾ ಎ.ಎ ಪೆರ್ಲ ಕೌಟುಂಬಿಕ ಸಲಹೆ ನೀಡಿದರು. ಜ್ಞಾನ ವಿಕಾಸ ಕೇಂದ್ರ ಪೆರ್ಲ ನಲ್ಕ ವಲಯದವರಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ದಾಸ ಸಂಕೀರ್ತಗಾರ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಭಜನಾ ಸತ್ಸಂಗ ಜರಗಿತು.