ಪೆರ್ಲ: "ಜೀವನದಲ್ಲಿ ಸಂಭವಿಸುವ ತಪ್ಪನ್ನು ಒಪ್ಪಿಕೊಳ್ಳುವುದು ನಮ್ಮ ಸಂಸ್ಕೃತಿಯಾಗಬೇಕು ಮಾತ್ರವಲ್ಲ ಮುಂದೆ ತಪ್ಪು ಆಗದಂತೆ ಮುಂಜಾಗ್ರತೆ ವಹಿಸಿ ಯಶಸ್ಸು ಸಾಧಿಸುವುದೇ ಪ್ರಗತಿ ಎಂದು ಕಿರು ಕೈಗಾರಿಕೋದ್ಯಮದ ಜಿಲ್ಲಾ ಅಧ್ಯಕ್ಷ ರಾಜರಾಮ್ ಪೆರ್ಲ ಅಭಿಪ್ರಾಯಪಟ್ಟರು.
ಅವರು ಧ.ಗ್ರಾ.ಯೋಜನೆ ಮಂಜೇಶ್ವರ ತಾಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಡಿಯಡ್ಕದ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಜರಗುತ್ತಿರುವ 1801ನೇ ಮದ್ಯವರ್ಜನ ಶಿಬಿರ ದಲ್ಲಿ ನಾಲ್ಕನೇ ದಿನ ಗಣ್ಯರಿಂದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಜನ ಜಾಗೃತಿ ಕುಂಬಳೆ ವಲಯ ಅಧ್ಯಕ್ಷ ಮಹೇಶ್ ಪುಣಿಯೂರು, ಡಾ.ಮೋಹನ್ ಕುಮಾರ್ ಏತಡ್ಕ, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್ ಅಡ್ಕಸ್ಥಳ, ಪ್ರಗತಿಬಂಧು ಒಕ್ಕೂಟದ ಕುಂಬಳೆ ವಲಯಾಧ್ಯಕ್ಷ ಕಸ್ತೂರಿ, ಐತ್ತಪ್ಪ ಮಾಸ್ತರ್, ಧರ್ಮಸ್ಥಳ ಭಜನಾ ಪರಿಷತ್ ವಲಯಾಧ್ಯಕ್ಷ ದಿನೇಶ್ ಚೆರುಗೋಳಿ, ಜನ ಜಾಗೃತಿ ಕೇಂದ್ರ ಒಕ್ಕೂಟದ ಸುರೇಶ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿ, ನಾರಾಯಣ ಟೈಲರ್ ವಂದಿಸಿದರು ಕುಂಬಳೆ ವಲಯ ಮೇಲ್ವಿಚಾರಕ ಕೃಷ್ಣಪ್ಪ ನಿರೂಪಿಸಿದರು.
ಶಿಬಿರದಲ್ಲಿ ಬದಿಯಡ್ಕ ವಲಯ ಅಬಕಾರಿ ಅಧಿಕಾರಿ ಜನಾರ್ದನ ನೇರಪ್ಪಾಡಿ ಗುಂಪು ಸಲಹೆ ಹಾಗೂ ಡಾ.ಸ್ವಪ್ನ ಜೆ.ಉಕ್ಕಿನಡ್ಕ ಕೌಟುಂಬಿಕ ಸಲಹೆ ನೀಡಿದರು. ಇಡಿಯಡ್ಕ ಉಳ್ಳಾಲ್ತಿ ಭಜನಾ ಮಂಡಳಿಯವರು ಭಜನಾ ಸಂಕೀರ್ತನೆ ನಡೆಸಿದರು.