HEALTH TIPS

ಚಂದ್ರನ ಅಂಗಳದಿಂದ 1.934 ಕೆಜಿ ಮಣ್ಣು ತಂದ ಚೀನಾ

         ಬೀಜಿಂಗ್‌: ಚಂದ್ರನ ದಕ್ಷಿಣ ಧ್ರುವದಲ್ಲಿರುವ, ಭೂಮಿಯಿಂದ ನೇರವಾಗಿ ಕಾಣದ ಪ್ರದೇಶದಿಂದ ಚೀನಾದ ಚಾಂಗ್'ಇ-6 ನೌಕೆ ಕೆಲವು ದಿನಗಳ ಹಿಂದೆ ಹೊತ್ತು ತಂದಿರುವ ಮಾದರಿಗಳು 1934.3 ಗ್ರಾಂಗಳಷ್ಟು (1.934 ಕೆಜಿ) ತೂಕವಿದೆ.

           ಭೂಮಿಯನ್ನು ಸ್ಪರ್ಶಿಸಿದ್ದ ನೌಕೆಯ ಘಟಕವನ್ನು ತೆರೆದು ಮಾದರಿಗಳನ್ನು ಸಂಗ್ರಹಿಸಿರುವ ಚೀನಾದ ಬಾಹ್ಯಾಕಾಶ ಸಂಸ್ಥೆ ಸಿಎನ್‌ಎಸ್‌ಎ ಈ ಬಗ್ಗೆ ಮಾಹಿತಿ ನೀಡಿದೆ.

           'ಚಂದ್ರನ ಅಂಗಳನಿಂದ ಭೂಮಿಗೆ ತರಲಾಗಿರುವ ಮಾದರಿಗಳನ್ನು ಮೇಲ್ನೋಟಕ್ಕೆ ನೋಡಿದಾಗ, ಈ ಹಿಂದೆ ಅಲ್ಲಿಂದ ತಂದ ಮಾದರಿಗಳಿಗೆ ಹೋಲಿಸಿದರೆ ಇವು ಮೆದುವಾಗಿದ್ದು(ಅರೆ ದ್ರವಸ್ಥಿತಿ) ಗಂಟು ಗಂಟಾಗಿವೆ' ಎಂದು ಸಿಎನ್‌ಎಸ್‌ಎಯ ಚಂದ್ರನ ಅಧ್ಯಯನ ಮತ್ತು ಬಾಹ್ಯಾಕಾಶ ಎಂಜಿನಿಯರಿಂಗ್‌ ಕೇಂದ್ರದ ಉಪ ನಿರ್ದೇಶಕ, ಚಾಂಗ್‌'ಇ-6 ಯೋಜನೆ ವಕ್ತಾರ ಗೆ ಪಿಂಗ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

              ವಿಜ್ಞಾನಿಗಳು ಈ ಮಾದರಿಗಳನ್ನು ದಾಸ್ತಾನು ಮಾಡುವುದರ ಜೊತೆಗೆ ಸಂಸ್ಕರಿಸಲಿದ್ದು, ಬಳಿಕ ನಿಗದಿಯಂತೆ ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಲಿದ್ದಾರೆ.

               'ಮಾನವನ ಇತಿಹಾಸದಲ್ಲಿ ಭೂಮಿಗೆ ನೇರವಾಗಿ ಕಾಣದ ಚಂದ್ರನ ಮೇಲ್ಮೈನಿಂದ ಮಾದರಿಗಳನ್ನು ಮೊದಲ ಬಾರಿಗೆ ಸಂಗ್ರಹಿಸಲಾಗಿದೆ. ಈ ಅಧ್ಯಯನಕ್ಕೆ ವಿಶಿಷ್ಟ ವೈಜ್ಞಾನಿಕ ಮಹತ್ವವಿದೆ. ಚಂದ್ರನ ವಿಕಾಸಕ್ಕೆ ಅರ್ಥೈಸಿಕೊಳ್ಳಲು ಇದು ನೆರವಾಗಲಿದೆ. ಅಲ್ಲದೇ, ಚಂದ್ರನ ಸಂಪನ್ಮೂಲಗಳ ಅಧ್ಯಯನ ಮತ್ತು ಬಳಕೆಯ ವೇಗವನ್ನು ಇದು ಹೆಚ್ಚಿಸಲಿದೆ.ಈ ಮಾದರಿಗಳು ಇಡೀ ಮನುಕುಲಕ್ಕೆ ದೊಡ್ಡ ಆಸ್ತಿಯಾಗಲಿದೆ' ಎಂದು ಸಿಎನ್‌ಎಸ್‌ಎ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries