ಕಾಸರಗೋಡು: ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ ಜುಲೈ 1ರಂದು ಸಂಜೆ 5ಕ್ಕೆ ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರುಗಲಿರುವುದು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್‍ನಾರಾಯಣ್ ತೊಟ್ಟೆತ್ತೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕನ್ನಡ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸುವರು. ಲೇಖಕ ಕೆ. ವಿಷ್ಣು ಶ್ಯಾನುಭಾಗ್ ಕುಡ್ಲು ಅವರಉ ಕನ್ನಡ ಪತ್ರಿಕೆಗಳ ಕುರಇತು ಮಾತನಾಡುವರಉ. ಕೆಸಿಎನ್ ಚ್ಯಾನೆಲ್ ನಿರ್ದೇಶಕ ದಿವಾಕರ ಉಪಸ್ಥಿತರಿರುವರ. ಈ ಸಂದರ್ಭ ಪತ್ರಕರ್ತ, ಲೇಖಕ, ಸಂಘಟಕ ರವಿ ನಾಯ್ಕಾಪು ಅವರನ್ನು ಗೌರವಿಸಲಾಗುವುದು.