HEALTH TIPS

ಕುವೈತ್‌: 2 ವರ್ಷದಲ್ಲಿ 1400ಕ್ಕೂ ಹೆಚ್ಚು ಭಾರತೀಯರ ಸಾವು

        ವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಕುವೈತ್‌ನಲ್ಲಿ ಭಾರತದ 1400ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ.

         2021ರ ಮಾರ್ಚ್‌ನಿಂದ 2023ರ ಡಿಸೆಂಬರ್‌ವರೆಗೆ ಕುವೈತ್‌ನ ಭಾರತೀಯ ರಾಯಭಾರ ಕಚೇರಿಗೆ ಅಲ್ಲಿರುವ ಭಾರತೀಯ ಕಾರ್ಮಿಕರಿಂದ 1600ಕ್ಕೂ ಹೆಚ್ಚು ದೂರುಗಳು ಬಂದಿವೆ.

ಬಹುತೇಕ ದೂರುಗಳು ವೇತನ ವಿಳಂಬ, ಕಳಪೆ ಮೌಲಸೌಕರ್ಯ ಪೂರೈಕೆ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿವೆ.

           ಕುವೈತ್‌ನಲ್ಲಿನ ಅಗ್ನಿ ಅವಘಡದಿಂದ ಮೃತಪಟ್ಟ 49 ಮಂದಿಯಲ್ಲಿ 40 ಜನ ಭಾರತ ಮೂಲದವರು. ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವವರು ಅಲ್ಲಿ ಏನೆಲ್ಲ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವ ವಿಷಯದ ಚರ್ಚೆ ಈಗ ಕಾವು ಪಡೆದುಕೊಂಡಿದೆ.

2022 ಹಾಗೂ 2023ರಲ್ಲಿ ಕುವೈತ್‌ನಲ್ಲಿ ಮೃತಪಟ್ಟ ವಲಸೆ ಕಾರ್ಮಿಕರಲ್ಲಿ 708 ಮಂದಿ ಭಾರತೀಯರು ಇದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ವರ್ಷ ಫೆಬ್ರುವರಿಯಲ್ಲಿ ಸಂಸತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರರೂಪದಲ್ಲಿ ತಿಳಿಸಿತ್ತು. ಕೋವಿಡ್ ಸಂದರ್ಭದಲ್ಲಿ-2020 ಹಾಗೂ 2021ರ ಅವಧಿಯಲ್ಲಿ ಒಟ್ಟು 2,480 ಭಾರತೀಯರು ಕುವೈತ್‌ನಲ್ಲಿ ಮೃತಪಟ್ಟಿದ್ದರು. 2014ರಿಂದ 2018ರ ಕಾಲಘಟ್ಟದಲ್ಲಿಯೂ 2,932 ಭಾರತೀಯರು ಅಲ್ಲಿ ಅಸುನೀಗಿದ್ದರು. 2018ರಲ್ಲಿ ಅಲ್ಲಿ ಮೃತಪಟ್ಟ 659 ಭಾರತೀಯರಲ್ಲಿ 24 ಮಂದಿ ಕರ್ನಾಟಕದವರಾಗಿದ್ದರು. ಕೋವಿಡ್‌ ಸಂದರ್ಭದಲ್ಲಿ ಕುವೈತ್‌ನಿಂದ ದೊಡ್ಡ ಸಂಖ್ಯೆಯಲ್ಲಿ ಭಾರತದ ಕಾರ್ಮಿಕರು ತವರಿಗೆ ಮರಳಿದ್ದರು ಎಂದು ವಿದೇಶಾಂಗ ಸಚಿವಾಲಯವು ಮಾಹಿತಿ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries