ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ದಿನಾಂಕ ಪ್ರಕಟಣೆಗಾಗಿ ಮಠಾಧಿಪತಿಗಳು, ಧಾರ್ಮಿಕ ನೇತಾರರನ್ನೊಳಗೊಂಡ ಸಮಾಲೋಚನಾ ಸಭೆ ಜೂನ್ 2ರಂದು ಬೆಳಗ್ಗೆ 10ಕ್ಕೆ ದೇವಸ್ಥಾನ ಸಭಾಂಗಣದಲ್ಲಿ ಜರುಗಲಿದೆ.
ಮಠಾಧಿಪತಿಗಳು, ಧಾರ್ಮಿಕ ಮುಖಂಡರಲ್ಲದೆ, ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್. ಮುರಳಿ, ಸಹಾಯಕ ಆಯುಕ್ತ ಪ್ರದೀಪ್ ಕುಮಾರ್, ಬ್ರಹ್ಮಕಲಶೋತ್ಸವ-ನವೀಕರಣ ಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಳ್ಗೊಳ್ಳುವರು.