ವಿಶ್ವಸಂಸ್ಥೆ: ಮಕ್ಕಳ ಮೇಲಿನ ಹಿಂಸಾಚಾರ ಪ್ರಕರಣಗಳು 2023ರಲ್ಲಿ ಹಲವು ಪಟ್ಟು ಹೆಚ್ಚಾಗಿವೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
ವಿಶ್ವಸಂಸ್ಥೆ: ಮಕ್ಕಳ ಮೇಲಿನ ಹಿಂಸಾಚಾರ ಪ್ರಕರಣಗಳು 2023ರಲ್ಲಿ ಹಲವು ಪಟ್ಟು ಹೆಚ್ಚಾಗಿವೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ.
ಇಸ್ರೇಲ್ ಮತ್ತು ಪ್ಯಾಲೇಸ್ಟಿನ್ ನಡುವಿನ ಸಂಘರ್ಷ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸೇರಿದಂತೆ ಹಲವು ಸಂಘರ್ಷಗಳಲ್ಲಿ ಮಕ್ಕಳ ಹತ್ಯೆಗಳು ನಡೆದಿವೆ. ಅಲ್ಲದೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಸಶಸ್ತ್ರ ಸಂಘರ್ಷದಲ್ಲಿ ಮಕ್ಕಳು ಕುರಿತ ವಾರ್ಷಿಕ ವರದಿ ಮಂಗಳವಾರ ಲಭ್ಯವಾಗಿದ್ದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿರುದ್ಧದ ಘರ್ಷಣೆಗಳ ಸರಣಿಯಲ್ಲಿ ಕಾಂಗೊ, ಬುರ್ಕಿನಾ ಫಾಸೊ, ಸೊಮಾಲಿಯಾ ಮತ್ತು ಸಿರಿಯಾ ಉಲ್ಲೇಖಿಸಿ 'ಹಿಂಸಾಚಾರ ಪ್ರಕರಣಗಳು ಶೇ 21ರಷ್ಟು ಹೆಚ್ಚಳವಾಗಿವೆ' ಎಂದು ತಿಳಿಸಿದೆ.
ಇಸ್ರೇಲ್ ಪಡೆಗಳು ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡಿ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿವೆ. ಮಕ್ಕಳನ್ನು ಕೊಲ್ಲುವುದು, ಗಾಯಗೊಳಿಸುವುದು ಮತ್ತು ಅಪಹರಣ ಮಾಡುವುದು ವ್ಯಾಪಕವಾಗಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.