ಕಾಸರಗೋಡು: 'ವಿಜಯ್-2024' ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯಿತಿ ಎಸ್ಸೆಸೆಲ್ಸಿ, ಪ್ಲಸ್ ಟು ತರಗತಿಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಶಾಲೆಗಳು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2023-24 ನೇ ಸಾಲಿನ ಎಸ್ಸೆಸೆಲ್ಸಿಮತ್ತು ಪ್ಲಸ್ ಟು ಪರೀಕ್ಷೆಗಳಲ್ಲಿ ಎಪಿಎಲ್‍ಗಳಿಗಿಂತ ಹೆಚ್ಚಿನದನ್ನು ಹೊಂದಿರುವ ಹೈಯರ್ ಸೆಕೆಂಡರಿ, ವೊಕೇಶನಲ್ ಮತ್ತು ತಲಾ 10 ಶಾಲೆಗಳುಹೈಯರ್ ಸೆಕೆಂಡರಿ ಶಾಲೆಗಳಲ್ಲಿ 1195ಕ್ಕಿಂತ ಹೆಚ್ಚು ಅಂಕ ಗಳಿಸಿದ 28 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಸತತ ಐದು ವರ್ಷಗಳಿಂದ ಕುಟುಂಬಶ್ರೀ ರಾಜ್ಯ ಕಲಾ ಉತ್ಸವದಲ್ಲಿ ಚಾಂಪಿಯನ್ ಆಗಿರುವ ಕುಟುಂಬಶ್ರೀ ಜಿಲ್ಲಾ ಮಿಷನನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಪ್ರಶಸ್ತಿ ವಿತರಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಇಂತಹ ಪ್ರಶಸ್ತಿಗಳನ್ನು ಭವಿಷ್ಯದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಪ್ರೇರಣೆಯಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು. ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೀತಾ ಕೃಷ್ಣನ್, ಕೆ. ಶಕುಂತಲಾ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ. ದಿನೇಶ, ವಿಎಚ್‍ಎಸ್‍ಸಿ ಸಹಾಯಕ ನಿರ್ದೇಶಕಿ ಇ.ಆರ್.ಉದಯಕುಮಾರಿ, ಡಯಟ್ ಪ್ರಾಂಶುಪಾಲ ರಘುರಾಮಭಟ್, ಹೈಯರ್ ಸೆಕೆಂಡರಿ ಜಿಲ್ಲಾ ಸಂಯೋಜಕ ಸಿ.ವಿ.ಅರವಿಂದಾಕ್ಷನ್ ಉಪಸ್ಥಿತರಿದ್ದರ. ಜಿಲ್ಲಾ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಸ್ವಾಗತಿಸಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ವಂದಿಸಿದರು.