ಕಾಸರಗೋಡು: ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ವನವನ್ನು ಉತ್ತೇಜಿಸುವ ನಿಟ್ಟಿನಲ್ಲಿ 'ಹಸಿರು ಕೇರಳ ಮಿಷನ್'ವತಿಯಿಂದ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 1000ಕ್ಕೂ ಹೆಚ್ಚು ಹೊಸ ಗ್ರೀನ್ ಫೀಲ್ಡ್‍ಗಳನ್ನು ಆರಂಭಿಸುವ ಗುರಿ ಹೊಂದಲಾಗಿದ್ದು, ಇದರ ಅಂಗವಾಗಿ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗಳಲ್ಲಿ ತಲಾ ಒಂದರಂತೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹಸಿರು ವನ ನಿರ್ಮಾಣಕ್ಕಾಗಿ ಸಸ್ಯಗಳನ್ನು ನೆಡಲಾಗುವುದು. ಇದಲ್ಲದೇ 405 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 870 ಹೊಸ ಗ್ರೀನ್ ಫೀಲ್ಡ್ ಗಳನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವುದು. ಪ್ರಸಕ್ತ 203 ಹೊಸ ಹಸಿರು ಕ್ಷೇತ್ರಗಳು ಕಾಸರಗೋಡು ಜಿಲ್ಲೆಯಲ್ಲಿವೆ. ಹಸಿರು ಉದ್ಯಾನ ಯೊಜನೆಯನ್ವಯ 50 ಎಕರೆ ವಿಸ್ತೀರ್ಣದಲ್ಲಿ ಬೆಳೆಸಲು ಹಮ್ಮಿಕೊಂಡಿರುವ ಹಸಿರು ಉದ್ಯಾನವನ್ನು ವಿವಿಧ ಕೈಗಾರಿಕಾ ವಠಾರದಲ್ಲಿ ನಡೆಸಲಾಗುವುದು. ತಿರುವನಂತಪುರಂನಲ್ಲಿರುವ ಟ್ರಾವಂಕೂರ್ ಟೈಟಾನಿಯಂ ಪ್ರೋಡಕ್ಟ್ಸ್‍ನ ಎರಡು ಎಕರೆ ಮತ್ತು ಪೂಙËರ್ ಐಎಚ್‍ಆರ್‍ಡಿ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್, ಆಲಪ್ಪುಳ ಕೆಎಸ್‍ಡಿಪಿಯ ತಲಾ 10 ಎಕರೆ ಪ್ರದೇಶವನ್ನು ಹಸಿರೀಕರಣಕ್ಕೆ ಬಳಸಲಾಗುವುದು. ಒಂದು ಬ್ಲಾಕ್‍ನಲ್ಲಿ ಕನಿಷ್ಠ ಒಂದು ಮಾದರಿ ಹಸಿರು ಉದ್ಯಾನ ಸಜ್ಜುಗೊಳಿಸಲಾಗುವುದು. ಕಾಂಡ್ಲಾ ಸಸ್ಯಗಳನ್ನು ರಕ್ಷಿಸುವ ಉದ್ದೇಶದಿಂದ ಆಲಪ್ಪುಳ ಜಿಲ್ಲೆಯ ಅಂಬಲಪುಳ ಬ್ಲಾಕ್ ಪಂಚಾಯತ್ ನೇತೃತ್ವದಲ್ಲಿ ಕಾಂಡ್ಲಾ ಹಸಿರುವನ ಯೋಜನೆಯನ್ನೂ ಪ್ರಾರಂಭಿಸಲಾಗುವುದು. ಅಲ್ಲದೆ ದಕ್ಷಿಣ ರೈಲ್ವೆ ಸಹಯೋಗದಲ್ಲಿ ದಕ್ಷಿಣ ಜಿಲ್ಲೆಗಳ ವಿವಿಧೆಡೆ 7 ಎಕರೆಯಲ್ಲಿ ಹಸಿರುವನ ಯೋಜನೆ ಆರಂಭಿಸಲಾಗುವುದು.
ಆಯಾ ಸ್ಥಳಗಳಲ್ಲಿ ಹಸಿರು ವನ ಯೊಜನೆ ಜಾರಿಗೊಳಿಸುವ ಮೂಲಕ ಸ್ಥಳೀಯ ಜೀವವೈವಿಧ್ಯತೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ಯೋಜನೆ ಆರಂಭದಿಂದ ಮತ್ತು ನಂತರದನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಇರಲಿದೆ. ಆಯಾ ಪ್ರದೇಶದ ಜನರಿಂದ ಸಸಿಗಳ ಸಂಗ್ರಹ, ಸಸಿ ವಿನಿಮಯ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆ, ಅಯ್ಯಂಕಾಳಿ ಉದ್ಯೋಗ ಖಾತ್ರಿ ಯೋಜನೆ, ಸಾಮಾಜಿಕ ಅರಣ್ಯ ಇಲಾಖೆ, ಕೃಷಿ ಇಲಾಖೆ, ಗಿಡಮೂಲಿಕೆ ಮಂಡಳಿ, ಕೇರಳ ಅರಣ್ಯ ಸಂಶೋಧನಾ ಸಂಸ್ಥೆ, ಜವಾಹರಲಾಲ್ ನೆಹರು ಟ್ರಾಪಿಕಲ್ ಬೊಟಾನಿಕಲ್ ಗಾರ್ಡನ್, ಅರಣ್ಯ ಕಾಲೇಜು ಮುಂತಾದವು ಹಸಿರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿವೆ.